– ಭಾರತದ ಪ್ರಮುಖ ಕ್ರೀಡಾ ಉಡುಪು ಬ್ರ್ಯಾಂಡ್ ಆಗಿಸುವ ಗುರಿ
ಮುಂಬೈ: ರಿಲಯನ್ಸ್ ರಿಟೇಲ್ನ ಅಧಿಕ ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪು ಬ್ರ್ಯಾಂಡ್ ಪರ್ಫಾರ್ಮ್ಯಾಕ್ಸ್ ಗೆ ಸ್ಟಾರ್ ಕ್ರಿಕೆಟಿಗ ಹಾಗೂ ಭಾರತದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.
ಪರ್ಫಾರ್ಮ್ಯಾಕ್ಸ್ ಭಾರತೀಯ ಬ್ರ್ಯಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮಿಸುವ ಗುರಿ ಹೊಂದಿದೆ. ಬುಮ್ರಾ ಬದ್ಥತೆ ಮತ್ತು ಪರಿಣತಿಗೆ ಹೆಸರಾಗಿದ್ದಾರೆ. ಪರ್ಫಾರ್ಮ್ಯಾಕ್ಸ್ ಸಹ ಇದೇ ಪರಿಣತಿಗೆ ಹೆಸರಾಗಿದ್ದು, ಬೂಮ್ರಾ ಈ ಬ್ರ್ಯಾಂಡ್ಗೆ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಬೆಂಕಿ ಬೌಲಿಂಗ್ ಇದೀಗ ಬುಮ್ರಾ ಏಕದಿನ ಕ್ರಿಕೆಟ್ನ ನಂ.1 ಬೌಲರ್
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ರಿಟೇಲ್ನ ಫ್ಯಾಷನ್ ಮತ್ತು ಲೈಫ್ಸ್ಟೈಲ್ನ ಸಿಇಒ ಅಖಿಲೇಶ್ ಪ್ರಸಾದ್, ಜಸ್ಪ್ರೀತ್ ಬುಮ್ರಾ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಬುಮ್ರಾ ಹಲವು ವರ್ಷಗಳಿಂದಲೂ ಭಾರತ ತಂಡದ ಪ್ರಮುಖ ಫೇಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾರತದ ನಂ.1 ಕ್ರೀಡಾ ಬ್ರ್ಯಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಪರ್ಫಾರ್ಮ್ಯಾಕ್ಸ್ ಅನ್ನು ನಮ್ಮ ಗ್ರಾಹಕರಿಗೆ ಒಂದು ಉತ್ತಮ ಮತ್ತು ಆದ್ಯತೆಯ ಬ್ರ್ಯಾಂಡ್ ಆಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದೇವೆʼಎಂದು ಹೇಳಿದ್ದಾರೆ.
Advertisement
Advertisement
ಜಸ್ಪ್ರೀತ್ ಬುಮ್ರಾ ಮಾತನಾಡಿ, ಕ್ರೀಡಾಪಟುವಾಗಿ ನಾನು ಧರಿಸುವ ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. ಸರಿಯಾಗಿ ಫಿಟ್ ಆಗಿರುವ ಉಡುಪು ಉತ್ತಮ ಆಟವಾಡಲು ನೆರವಾಗುತ್ತದೆ. ಪರ್ಫಾರ್ಮ್ಯಾಕ್ಸ್ನಲ್ಲಿ ತಾಂತ್ರಿಕವಾಗಿ ಸುಧಾರಿತ ಆಕ್ಟಿವ್ ವೇರ್ನ ಹಲವು ವಿಧಗಳಿವೆ. ಇವು ಭಾರತದ ಮುಂದಿನ ತಲೆಮಾರಿನ ಅಥ್ಲೀಟ್ಗಳಿಗೆ ಉತ್ತಮ ಸಂಗಾತಿಯಾಗಬಲ್ಲವು. ಉತ್ತಮ ಸಾಧನೆ ಮಾಡಬೇಕು ಎಂಬ ನನ್ನ ಧ್ಯೇಯಕ್ಕೂ ಈ ಬ್ರ್ಯಾಂಡ್ನ ಧ್ಯೇಯಕ್ಕೂ ಹೊಂದಿಕೆ ಆಗುವುದರಿಂದ ಇದರ ಜೊತೆಗೆ ನಾನು ಗುರುತಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿʼ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್
ಜಸ್ಪ್ರೀತ್ ಬುಮ್ರಾ ಅವರ ಮೂಲಕ ಗ್ರಾಹಕರನ್ನು ತಲುಪುವ ಜೊತೆಗೆ, ರಿಲಾಯನ್ಸ್ ರಿಟೇಲ್ನ ಫ್ಯಾಷನ್ ಮತ್ತು ಲೈಫ್ಸ್ಟೈಲ್ ಸ್ಟೋರ್ಗಳಲ್ಲಿ ಎಕ್ಸ್ಕ್ಲೂಸಿವ್ ಬ್ರ್ಯಾಂಡ್ ಔಟ್ಲೆಟ್ಗಳನ್ನು ಸ್ಥಾಪಿಸಲಾಗುತ್ತದೆ. ಮಲ್ಟಿ ಬ್ರ್ಯಾಂಡ್ ಔಟ್ಲೆಟ್ಗಳಲ್ಲೂ ಪರ್ಫಾರ್ಮ್ಯಾಕ್ಸ್ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲ ಡಿಜಿಟಲ್ ವೇದಿಕೆಗಳಲ್ಲೂ ಲಭ್ಯವಿರಲಿದೆ. ಪರ್ಫಾರ್ಮ್ಯಾಕ್ಸ್ ರಿಲಯನ್ಸ್ ರಿಟೇಲ್ನ ಸ್ವಂತ ಬ್ರ್ಯಾಂಡ್ ಆಗಿದ್ದು, ಆಕ್ಟಿವ್ ವೇರ್ ಸಾಮಗ್ರಿಗಳಲ್ಲಿ ವಿಶೇಷ ಪರಿಣಿತಿ ಹೊಂದಿದೆ. ಜೊತೆಗೆ ಪಾದರಕ್ಷೆ, ಉಡುಪು ಮತ್ತು ಅಕ್ಸೆಸರಿಗಳು ಇನ್ನಿತರ ಉತ್ಪನ್ನಗಳನ್ನು ಒದಗಿಸುತ್ತದೆ. ಪ್ರಸ್ತುತ 330ಕ್ಕೂ ಹೆಚ್ಚು ನಗರಗಳಲ್ಲಿ 1,000ಕ್ಕೂ ಹೆಚ್ಚು ಸ್ಟೋರ್ಗಳಲ್ಲಿ ಬ್ರ್ಯಾಂಡ್ ಅಸ್ತಿತ್ವ ಹೊಂದಿದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]