ಬೆಂಗಳೂರು: ಹರಿಯಾಣದ (Haryana) ಜನ ಕಾಂಗ್ರೆಸ್‌ನ ಜಾತಿ ರಾಜಕಾರಣ ತಿರಸ್ಕರಿಸಿದ್ದಾರೆ. ಬಿಜೆಪಿ ಸಂಪೂರ್ಣ ವಿಜಯದತ್ತ ದಾಪುಗಾಲು ಹಾಕ್ತಿದೆ. ಮೋದಿಯವರ ವರ್ಚಸ್ಸು, ಕಾರ್ಯಕರ್ತರ ಶ್ರಮ ವಿಜಯ ತಂದುಕೊಟ್ಟಿದೆ. ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅನ್ನೋದಕ್ಕೆ ಇದು ದಿಕ್ಸೂಚಿ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿನ (Congress) ಜಾತಿ ರಾಜಕಾರಣವನ್ನು ಹರಿಯಾಣದ ಜನ ತಿರಸ್ಕರಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಶ್ರೇಷ್ಠ ಭಾರತ್, ಅಮೃತ್ ಕಾಲ್ ಈ ವಿಚಾರಕ್ಕೆ ಜನ ಸಾಥ್ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲೂ ಮುಂದೆ ಇದೇ ಫಲಿತಾಂಶ ಬರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ – ಆಯೋಗದ ವೆಬ್‌ಸೈಟ್ ದೂರಿದ ಕಾಂಗ್ರೆಸ್
Advertisement
Advertisement
ಇನ್ನೂ ಜಾತಿಗಣತಿ ಹಾಗೂ ಒಳ ಮೀಸಲಾತಿ ಬಗ್ಗೆ ಮಾತನಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಬಾರದು. ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡಬೇಕು. ನಾಳೆ ಸಮಾಜದಲ್ಲಿ ಅದು ಗೊಂದಲವನ್ನು ಉಂಟುಮಾಡುವಂತೆ ಇರಬಾರದು ಎಂದು ನಾವು ಈಗಾಗಲೇ ಸೂಚಿಸಿದ್ದೇವೆ. ಆದರೆ ಕಾಂಗ್ರೆಸ್‌ನವರು ಡಬಲ್ ಗೇಮ್ ಆಡ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಒಳಮೀಸಲಾತಿ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ದಲಿತರು, ಒಬಿಸಿ ವರ್ಗಗಳ ಮೇಲೆ ಯಾವುದೇ ಕಾಳಜಿ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಮೋದಿ ಹಳ್ಳಿ-ಹಳ್ಳಿಗೆ ಹೋಗಿ ಕರ್ನಾಟಕದ ವಿಚಾರ ಪ್ರಚಾರ ಮಾಡ್ತಾರೆ, ಅದ್ಕೆ ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತೆ: ಕೋಳಿವಾಡ
Advertisement
ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಸಿದ್ದರಾಮಯ್ಯ ಕರೆಸಿಕೊಂಡಿದ್ದಾರೆ. ಅವರ ಕಾಲದಲ್ಲೇ ಕಾಂತರಾಜ್ ವರದಿ ಸಲ್ಲಿಕೆ ಆಯ್ತು. ಆಗ ಯಾಕೆ ಅವರು ವರದಿ ಜಾರಿ ಮಾಡಲಿಲ್ಲ? ಜಯಪ್ರಕಾಶ್ ಹೆಗಡೆ ಅಧ್ಯಯನ ಮಾಡದೇ ಕಾಂತರಾಜ್ ಡೇಟಾ ತಗೊಂಡು ವರದಿ ಸಲ್ಲಿಸಿದ್ದಾರೆ. ಇದರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಎಷ್ಟರ ಮಟ್ಟಿಗೆ ಸಿಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: Haryana Election Results | ಆಪ್‌ನಿಂದ ಬಿಜೆಪಿ ಮುನ್ನಡೆ?
Advertisement
ವರದಿ ವೈಜ್ಞಾನಿಕವಾಗಿ ನಡೆದಿರಬೇಕು, ಎಲ್ಲರಿಗೂ ನ್ಯಾಯ ಸಿಗಬೇಕು ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಈಗ ಸಿದ್ದರಾಮಯ್ಯ (CM Siddaramaiah) ತಮ್ಮ ಮೇಲಿನ ಹಗರಣ ಮರೆಮಾಚಲು ಜಾತಿ ಜನಗಣತಿ ವರದಿ ಬಳಕೆ ಮಾಡ್ಕೊಳ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಜನ ನೋಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಹರಿಯಾಣದಲ್ಲಿ ನಮ್ದೇ ಸರ್ಕಾರ, 50 ಸೀಟ್ ಪಕ್ಕಾ ಅಂತ ಆಂತರಿಕ ಸಮೀಕ್ಷೆ ಹೇಳಿದೆ: ಪರಮೇಶ್ವರ್