ಬೆಂಗಳೂರು: ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ (Jammu and Kashmir) ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಆಂತರಿಕ ಸಮೀಕ್ಷೆಯಲ್ಲೂ 50 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಇದೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
#WATCH | Bengaluru | Karnataka Home Minister G Parameshwara says, “It is not neck-to-neck competition. We are very clear in Haryana that we are going to form the government. Our internal survey says we will cross 50 seats…”
On caste census, he says, “This (issue of) caste… pic.twitter.com/hJUEedFp5x
— ANI (@ANI) October 8, 2024
Advertisement
ಬೆಂಗಳೂರಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಹಾಗೂ ಹರಿಯಾಣದಲ್ಲಿ (Haryana) ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸರ್ವೆಯಲ್ಲೂ ಕನಿಷ್ಠ 50 ಕ್ಷೇತ್ರಗಳಲ್ಲಿ ಗೆಲುವಿನ ವರದಿ ಬಂದಿದೆ. ಇದರಿಂದ ದೇಶದಲ್ಲಿ ಬದಲಾವಣೆ ಪ್ರಾರಂಭವಾಗಿದೆ ಎನ್ನಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Haryana Results| ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹಿನ್ನಡೆ
Advertisement
Advertisement
ದೀರ್ಘವಾಗಿ ಚರ್ಚೆ ಮಾಡಿ, ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿ ಈ ಗ್ಯಾರಂಟಿಗಳನ್ನು ತಗೊಂಡು ಬಂದಿದ್ದೇವೆ. ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟೀಕೆ ಮಾಡಿದ್ರು, ರಾಜ್ಯದಲ್ಲಿ ಜೆಡಿಎಸ್ ನಾಯಕರು ಕೂಡ ಟೀಕೆ ಮಾಡಿದ್ರು. ಯಾವ ಪಕ್ಷ ಜನರಿಗೆ ಸಹಾಯ ಮಾಡುತ್ತದೋ ಅವರ ಪರವಾಗಿ ಜನರು ನಿಲ್ತಾರೆ, ನಾವು ಕೂಡ ಇದನ್ನೇ ಮಾಡಬೇಕು ಅಂತಾ ಈಗ ಅವರಿಗೆ ಅರ್ಥ ಆಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್
Advertisement
ಇದೇ ವೇಳೆ ಜಾತಿ ಜನಗಣತಿ ವರದಿ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಾತಿ ಜನಗಣತಿ ನಾವು ತರದೇ ಇದ್ದಾಗ ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟುಬಿಟ್ರು ಅಂತಿದ್ರು. ಇವಾಗ ನಾವು ಜನ ಸಮುದಾಯದ ಮುಂದೆ ತರುತ್ತಿದ್ದೇವೆ ಅಂದಾಗ, ಅವರಿಗೆ ನುಂಗಲಾರದ ತುತ್ತಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹೆಚ್ಚು ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅದರ ಆಧಾರದ ಮೇಲೆ ಬರುವ ದಿನಗಳಲ್ಲಿ ಕಾರ್ಯಕ್ರಮ ಕೊಡಲು ಸಹಕಾರಿ ಆಗುತ್ತದೆ. ಹಾಗಾಗಿ ಅದು ಆಗಬಾರದು ಅಂದರೆ, ಈ ಸಮುದಾಯಗಳಿಗೆ ಯೋಜನೆ ಕೊಡಬಾರದಾ..? ಜನಸಂಖ್ಯೆ ಆಧಾರ ಇಟ್ಟುಕೊಂಡು ಯೋಜನೆ ಕೊಡಬೇಕು. ಅದಕ್ಕಾಗಿ ಜಾತಿ ಜನಗಣತಿ ವರದಿಯನ್ನು ಅನುಷ್ಟಾನಕ್ಕೆ ತರಬೇಕೆಂದು ಸಿಎಂ ಹೇಳಿದ್ದಾರೆ. ಅಕ್ಟೋಬರ್ 18ರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಒಕ್ಕಲಿಗ ಹಾಗೂ ಲಿಂಗಾಯತ ರಿಂದ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಸಮುದಾಯಗಳ ಬೆಂಬಲದ ಪ್ರಶ್ನೆ ಇಲ್ಲಿ ಬರೋದಿಲ್ಲ. ವಸ್ತು ಸ್ಥಿತಿ ಏನಿದೆ ಎಂದು ಜನರ ಮುಂದೆ ಇಡ್ತಾರೆ. ಅದು ಬೇಡ ಅಂದರೆ ಹೇಗೆ? ಇವತ್ತು 160 ಕೋಟಿ ಖರ್ಚು ಮಾಡಿ ಮಾಡಿದ್ದಾರೆ. ಮುಂದೆ ಕೇಂದ್ರ ಸರ್ಕಾರ ಸೆನ್ಸಸ್ ಮಾಡ್ತಿದೆ. ನಾನು ಸಿಎಂ ಪ್ರಧಾನಿಗಳ ಭೇಟಿ ಮಾಡಿದಾಗ ಸೆನ್ಸಸ್ ಮಾಡೋದಾಗಿ ಹೇಳಿದ್ರು. 28ರ ಚುನಾವಣೆಗೆ ಹೊಸ ಸೆನ್ಸಸ್ ಇರುತ್ತೆ ಅಂತಾ ಹೇಳಿದ್ರು. ಅವಾಗ ಬರಲ್ವಾ ಡೇಟಾ? ಅವಾಗ ವಿರೋಧ ಮಾಡಲ್ವಾ? ಫಸ್ಟ್ ಇದು ಬರಲಿ, ಪ್ರತಿ ಸೆನ್ಸಸ್ ಹತ್ತು ವರ್ಷಗಳಿಗೆ ಮಾಡಬೇಕು. ಇವಾಗ ಏರುಪೇರು ಆಗಿದೆ. 10 ವರ್ಷಗಳಲ್ಲಿ 15 ಪರ್ಸೆಂಟ್ ಸೆನ್ಸಸ್ ಆಗಿರಬಹುದು ಎಂದು ಅಂದಾಜು. ಅದರ ಆಧಾರದ ಮೇಲೆ ಇದು ಬಿಡುಗಡೆ ಮಾಡಿದ್ರೆ ಗೊತ್ತಾಗುತ್ತಲ್ಲ ಎಂದು ಹೇಳಿದ್ದಾರೆ.