Belgaum

ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ

Published

on

Share this

ಬೆಳಗಾವಿ: ಪಾನ್‍ಶಾಪ್ ಮಾಲೀಕನನ್ನು ರೌಡಿಶೀಟರ್ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ನಡೆದಿದೆ.

ಬಾಲಕೃಷ್ಣ ಶೆಟ್ಟಿ(55) ಹತ್ಯೆಯಾದ ದುರ್ದೈವಿ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಬಾಲಕೃಷ್ಣ ಶೆಟ್ಟಿ ಅವರು ಲಕ್ಷ್ಮೀ ನಗರದಲ್ಲಿ ಪಾನ್ ಶಾಪ್ ಇಟ್ಟುಕೊಂಡಿದ್ದರು. ರೌಡಿ ದತ್ತಾ ಜಂತಿನಕಟ್ಟಿ(22) ಅವರು ನಿಮ್ಮ ಅಂಗಡಿಯಲ್ಲಿ ನನ್ನ ಮೊಬೈಲ್ ಕಳ್ಳತನವಾಗಿದೆ ಎಂದು ಗಲಾಟೆ ಮಾಡಿದ್ದಾರೆ. ಈ ಹಿಂದೆಯೂ ಪಾನ್ ಶಾಪ್‍ನಲ್ಲಿ ಉದ್ರಿ ನೀಡುತ್ತಿಲ್ಲ ಎಂದು ಕಿರಿಕ್ ಮಾಡಿದ್ದರು. ಇದೇ ವಿಚಾರಕ್ಕೆ ನಿನ್ನೆ ಮಧ್ಯಾಹ್ನ ಕೂಡ ಪಾನ್ ಶಾಪ್‍ಗೆ ಬಂದು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

ಈ ವೇಳೆ ಸ್ಥಳೀಯರು ಮಧ್ಯಸ್ಥಿಕೆ ವಹಿಸಿ ಜಗಳಬಿಡಿಸಿ ದತ್ತಾನನ್ನು ಕಳುಹಿಸಿದ್ದರು. ದತ್ತಾ ಇಷ್ಟಕ್ಕೆ ಸುಮ್ಮನಾಗದೇ ತಡರಾತ್ರಿ ಮನೆಗೆ ನುಗ್ಗಿ ಬಾಲಕೃಷ್ಣ ಶೆಟ್ಟಿ ಅವರನ್ನು ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ 

ಹತ್ಯೆಗೈದು ದತ್ತಾ ಪರಾರಿಯಾಗಿದ್ದು, ಅವನಿಗಾಗಿ ಶಹಾಪೂರ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement