ತುಮಕೂರು: ನನಗೆ ಮೂರು ಬಾರಿ ಸಿಎಂ (CM) ಆಗುವ ಅವಕಾಶ ಇತ್ತು. ಆದರೆ ನನ್ನ ಹಣೆಬರಹನೋ ಅಥವಾ ದುರದೃಷ್ಟವೋ ಗೊತ್ತಿಲ್ಲ ಸಿಎಂ ಆಗಲಿಲ್ಲ ಎಂದು ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಡಿಸಿಎಂ ಜಿ.ಪರಮೇಶ್ವರ್ (G Parameshwar) ಬೇಸರ ಹೊರಹಾಕಿದ್ದಾರೆ.
ಶನಿವಾರ ತುಮಕೂರಿನ (Tumakuru) ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತಮ್ಮ ಸಿಬ್ಬಂದಿಗಳ ಕುರಿತು ಅವರು ಮಾತನಾಡಿದರು. ಇದನ್ನೂ ಓದಿ: ಈಜಲು ಹಳ್ಳಕ್ಕೆ ಇಳಿದ ಸಹೋದರರಿಬ್ಬರು ನೀರುಪಾಲು – ಪೋಷಕರ ಆಕ್ರಂದನ
2013ರಲ್ಲಿ ನಾನು ಸೋತೆ, ನಾನು ಗೆದ್ದಿದ್ದೆ ಹೌದಾದರೆ ಸಿದ್ದರಾಮಯ್ಯನವರು ಸಿಎಂ ಆಗುತ್ತಿರಲಿಲ್ಲ, ಅದೇ ರೀತಿ 2018ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿದ್ವಿ, ಆಗಲೂ ಒಂದು ಚಾನ್ಸ್ ಇತ್ತು. ಆದರೆ ಬೇರೆ ಯಾವುದೋ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ರು. ಈಗಲೂ ಇನ್ನೊಂದು ಅವಕಾಶ ಇತ್ತು. ಅದೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲರೂ ಒಟ್ಟಿಗೇ ಹೋಗೋಣ, 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ: ಸಿಎಂ ಡಿಕೆಶಿ
ರಾಜಕೀಯದಲ್ಲಿ ಏನೆನೋ ನಡಿತದೆ, ಹಾಗಾಗಿ ಈಗ ಸಿಎಂ ಸ್ಥಾನ ಸಿಕ್ಕಿಲ್ಲ. ಈಗ ನನಗೆ ಡಿಸಿಎಂ ಮಾಡಿದ್ದಾರೆ. ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಅವಲತ್ತುಕೊಂಡರು. ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಮಿಸ್; ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ: ಸುರೇಶ್ ಬಾಬು
