– ಹುಣಸೂರು ಮುಖಂಡರು, ಕಾರ್ಯಕರ್ತರಿಂದ ಸಿಎಂಗೆ ಅಭಿನಂದನೆ
ಬೆಂಗಳೂರು: ಪಕ್ಷಬೇಧ ಮರೆತು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿ. 2028ರ ವಿಧಾನಸಭೆ ಚುನಾವಣೆ (Assembly Election) ಗೆಲ್ಲುವುದು ನಿಮ್ಮ ಗುರಿಯಾಗಿರಲಿ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಮಾಜಿ ಶಾಸಕ ಮಂಜುನಾಥ್ ಹಾಗೂ ಮೈಸೂರು ಮುಖಂಡ, ವಕ್ತಾರ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಹುಣಸೂರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಅಭಿನಂದಿಸಿದ ಸಂದರ್ಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಮಿಸ್; ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ: ಸುರೇಶ್ ಬಾಬು
ಹಿಂದೆ ಆಗಿದ್ದು, ದ್ವೇಷ, ಅಸೂಯೆ, ಪ್ರತೀಕಾರ ಎಂಬುದನ್ನು ಮರೆಯಿರಿ. ಕೆಲವೊಮ್ಮೆ ತಪ್ಪು ಮಾಹಿತಿ, ಅಭಿಪ್ರಾಯಗಳಿಂದ ಯಡವಟ್ಟು ಆಗಿರಬಹುದು. ಆದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಭವಿಷ್ಯದ ಗುರಿ ಮರೆಯಬೇಡಿ ಎಂದರು. ಇದನ್ನೂ ಓದಿ: ನನಗೆ ಕೊಟ್ಟಿರೋ ಖಾತೆ ಬಗ್ಗೆ ಅಸಮಾಧಾನ ಇಲ್ಲ: ಬೈರತಿ ಸುರೇಶ್
ಇವತ್ತು ಬಂದಿರುವ ಸಿಎಂ ಹುದ್ದೆ ನನ್ನದಲ್ಲ, ನಿಮ್ಮದು, ರಾಜ್ಯದ ಜನರದು. ನೀವು ಇಲ್ಲ ಅಂದ್ರೆ ನಾನು ಇಲ್ಲ. ನನಗೆ ಬಂದಿರುವ ಈ ಹುದ್ದೆ ಹಿಂದೆ ನಿಮ್ಮ ಪರಿಶ್ರಮ, ಪ್ರೀತಿ, ವಿಶ್ವಾಸ, ಹೋರಾಟ ಕೆಲಸ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ನುಡಿದರು. ಇದನ್ನೂ ಓದಿ: INDIA ಸಭೆಯಲ್ಲಿರುವ ದೀದಿಗೆ ಶಾಕ್ – 20 ಟಿಎಂಸಿ ಸಂಸದರು ಎನ್ಡಿಎಗೆ!
ಈಗ ಯಾವುದೇ ಕಾರಣಕ್ಕೂ ಮೈ ಮರೆಯಬೇಡಿ. ಎಸ್‌ಐಆರ್ ಸಂಚಿಗೆ ನಿಮ್ಮ ಮತ ಬಲಿ ಆಗಲು ಬಿಡಬೇಡಿ. ಎಚ್ಚರಿಕೆಯಿಂದ ಇರಿ. ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಖ್ಯಾತ ಯೂಟ್ಯೂಬರ್ ಮರಿದಾಸ್ ಅರೆಸ್ಟ್
