ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ಉದ್ಯಮಿಯೊಬ್ಬ 125 ವರ್ಷದ ಹಳೆಯದಾದ ಐತಿಹಾಸಿಕ ಗುರುದ್ವಾರವನ್ನು ಕೆಡವಿದ್ದಾನೆ. ಈ ನಡೆಗೆ ಭಾರತ (India) ಖಂಡನೆ ವ್ಯಕ್ತಪಡಿಸಿದೆ.
ಗುರುದ್ವಾರ (gurdwara) ಕೆಡವಿದ್ದನ್ನು ಖಂಡಿಸಿ ಅಲ್ಪಸಂಖ್ಯಾತ ಸಿಖ್ ಸಮುದಾಯ ಪ್ರತಿಭಟನೆ ನಡೆಸಿದೆ. ಫಾರೂಕಾಬಾದ್‌ನಲ್ಲಿರುವ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸವನ್ನು ಭಾರತವು ಖಂಡಿಸಿದ್ದು, ಇದನ್ನು ಪೂಜ್ಯ ಸಿಖ್ ದೇವಾಲಯದ ಮೇಲಿನ ಅತ್ಯಂತ ಶೋಚನೀಯ ಮತ್ತು ವಿಧ್ವಂಸಕ ಕೃತ್ಯ ಎಂದಿದೆ. ಇದನ್ನೂ ಓದಿ: ಉಗಾಂಡದಲ್ಲಿ ಕೊಟ್ಟೂರು ಮಹಿಳೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್
ಜೂನ್ 24 ರ ರಾತ್ರಿ ಗುರುದ್ವಾರವನ್ನು ಕೆಡವಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆಯೇ ಇದನ್ನು ಕೆಡವಲಾಗಿದೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆಸಿ ಧಾರ್ಮಿಕ ರಚನೆಯ ಹಾನಿಗೊಳಗಾದ ಭಾಗಗಳನ್ನು ಪುನಃಸ್ಥಾಪಿಸುವಂತೆ ಪಾಕ್‌ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಒತ್ತಾಯಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪಾಕ್‌ಗೆ ಭಾರತ ಕರೆ ನೀಡಿದೆ.
ಪಾಕಿಸ್ತಾನದ ಫರೂಕಾಬಾದ್‌ನಲ್ಲಿರುವ 125 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಕ್ಕೆ ಸಂಬಂಧಿಸಿದ ತೀವ್ರ ದುಃಖಕರ ವರದಿಗಳನ್ನು ನಾವು ನೋಡಿದ್ದೇವೆ. ಪೂಜ್ಯ ಸಿಖ್ ದೇವಾಲಯದ ಮೇಲೆ ನಡೆದ ಈ ಅತ್ಯಂತ ಶೋಚನೀಯ ಮತ್ತು ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ಅಥವಾ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೈಸ್ವಾಲ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದಿಂದಲೇ ಪೆಟ್ರೋಲ್ ಖರೀದಿಸುತ್ತಿದೆ ರಷ್ಯಾ
ಇದು ಹೊಸ ಘಟನೆಯೇನಲ್ಲ. ಏಕೆಂದರೆ, ಈ ಹಿಂದೆಯೂ ಪಾಕ್‌ನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
