ಬಾಲಿವುಡ್ ನಟ ಆಮಿರ್ ಖಾನ್(Aamir Khan) ಹಾಗೂ ಗೌರಿ ಸ್ಪ್ರಾಟ್ (Gauri Spratt)ಇದೇ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆಮಿರ್-ಗೌರಿ ಮದುವೆಯ ಆಹಾರ ಮೆನುವನ್ನು(Wedding Menu) ಅವರಿಬ್ಬರ ಮಕ್ಕಳೇ ಖುದ್ದಾಗಿ ಯೋಜಿಸಿರುವುದು ವಿಶೇಷವಾಗಿದೆ.
ಈ ವಿಚಾರ ಈಗ ಸಿನಿ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಜುಲೈ 5ರಂದು ಮುಂಬೈನಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಸರಳವಾಗಿ ವಿವಾಹ ನೋಂದಣಿ ನಡೆಯಲಿದ್ದು, ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಈ ಮದುವೆಗೆ ಅಗತ್ಯವಿರುವ ಸಂಪೂರ್ಣ ಆಹಾರ ಮೆನುವನ್ನ ಆಮಿರ್ ಮತ್ತು ಗೌರಿ ಅವರ ಮಕ್ಕಳೇ ಪ್ಲ್ಯಾನ್ ಮಾಡಿದ್ದಾರೆ. ಸಮಾರಂಭದ ಎಲ್ಲಾ ಆಹಾರ ವ್ಯವಸ್ಥೆಯನ್ನು ಮಕ್ಕಳು ಆಯ್ಕೆ ಮಾಡಿದ್ದು, ಮದುವೆಯ ಇತರೆ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಆಮಿರ್ ಖಾನ್ಮಕ್ಕಳಾದ ಜುನೈದ್, ಐರಾ ಹಾಗೂ ಆಜಾದ್ ಮತ್ತು ಗೌರಿ ಸ್ಪ್ರಾಟ್ ಪುತ್ರ, ಇಬ್ಬರ ಮಕ್ಕಳೂ ಈ ಮದುವೆಯನ್ನು ವಿಶೇಷವಾಗಿಸಲು ಸಿದ್ಧತೆ ನಡೆಸಿದ್ದಾರೆ.
ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್, ಇದು ಮನೆಯಲ್ಲೇ ನಡೆಯುವ ಸರಳ ವಿವಾಹ ನೋಂದಣಿ. ಎರಡೂ ಕುಟುಂಬದವರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವು ಯಾವುದೇ ಅದ್ದೂರಿ ಆಚರಣೆ ಬಯಸುವುದಿಲ್ಲ ಎಂದು ಹೇಳಿದ್ದರು.ಇದನ್ನೂ ಓದಿ: ಗ್ರಾಮಾಯಣ ಟ್ರೈಲರ್‌ಗೆ ಸಖತ್ ರೆಸ್ಪಾನ್ಸ್ : ಜುಲೈ 3ಕ್ಕೆ ಸಿನಿಮಾ ರಿಲೀಸ್
ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಫ್ಯಾಷನ್ ಮತ್ತು ಉದ್ಯಮಶೀಲತೆ ಕ್ಷೇತ್ರದ ಹಿನ್ನೆಲೆ ಹೊಂದಿದ್ದಾರೆ. ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಆಮಿರ್ ಖಾನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌರಿ ಬಗ್ಗೆ ಈ ಹಿಂದೆ ಮಾತನಾಡಿದ್ದಆಮಿರ್ ಖಾನ್, ಗೌರಿ ನನ್ನ ಜೀವನಕ್ಕೆ ಬಂದಿರುವುದು ನನ್ನ ಅದೃಷ್ಟ. ಅವರ ಜೊತೆ ಇದ್ದಾಗ ನನಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈಗ ನನ್ನ ಜೀವನ ಸಂಪೂರ್ಣವಾಗಿದೆ ಎಂಬ ಭಾವನೆ ಮೂಡಿದೆ ಎಂದು ಹೇಳಿದ್ದರು.
ಆಮಿರ್ ಖಾನ್ ಈ ಹಿಂದೆ ರೀನಾ ದತ್ತಾ ಹಾಗೂ ಬಳಿಕ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಇಬ್ಬರಿಂದಲೂ ಬೇರ್ಪಟ್ಟ ಬಳಿಕ ಈಗ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ: ಕಿರುತೆರೆಗೆ ಎಂಟ್ರಿ ಕೊಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್
