– ನಾಳೆ ಬೆಂಗಳೂರಿಗೆ ಮೃತದೇಹ ಶಿಫ್ಟ್
ಬಳ್ಳಾರಿ: ಪತಿಯ ಜೊತೆ ಉಗಾಂಡ ದೇಶದಲ್ಲಿ ನೆಲೆಸಿದ್ದ ಕರ್ನಾಟಕ ವಿಜಯನಗರ (Vijayanagara) ಜಿಲ್ಲೆಯ ಕೊಟ್ಟೂರು ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿಯ ಬಿಂದು (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ (Women Suicide). ಇದನ್ನೂ ಓದಿ: Ram Temple Donation Theft| ಆರೋಪಿ ಮನೆಯಲ್ಲಿ ನಕಲಿ ‘ರಾಮರಾಜ್ಯ ಕೋಶ’ ಪೆಟ್ಟಿಗೆ, ಕ್ಯೂಆರ್ ಕೋಡ್ ಪತ್ತೆ!

ಪತಿ ಚಂದ್ರಶೇಖರ್ ಜೊತೆ ಮೃತ ಬಿಂದು ಉಗಾಂಡ ದೇಶದಲ್ಲಿ ನೆಲೆಸಿದ್ರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪಾರ್ಥಿವ ಶರೀರ ತರಲು ತರಳಬಾಳು ಮಠದ ಶ್ರೀಗಳು ಸಹಾಯಯಾಸ್ತ ಚಾಚಿದ್ದಾರೆ.
ವಿದೇಶಿ ರಾಯಭಾರಿಗಳನ್ನ ಸಂಪರ್ಕಿಸಿದ ತರಳಬಾಳು ಶ್ರೀಗಳು, ಪಾರ್ಥಿವ ಶರೀರ ತವರಿಗೆ ತರಿಸಲು ಮುಂದಾಗಿದ್ದಾರೆ. ಗುರುವಾರ ಬೆಳಗ್ಗೆ (ಜು.02) ಮೃತ ಬಿಂದು ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ. ಇದನ್ನೂ ಓದಿ: ಕೆ.ಆರ್ ಪುರಂ ತ್ರಿವಳಿ ಕೊಲೆ ಕೇಸ್; ಸಾಕ್ಷ್ಯ ಸಂಗ್ರಹಕ್ಕೆ ಘಟನೆ ಮರುಸೃಷ್ಟಿ ಮಾಡಿಸಿದ ಪೊಲೀಸರು
