ಶ್ರೀನಗರ: ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಅಮರನಾಥ ಯಾತ್ರೆ(Amarnath Yatra) ಇಂದಿನಿಂದ ಆರಂಭಗೊಂಡಿದೆ. ಬಹುಸ್ತರದ ಭದ್ರತಾ ವ್ಯವಸ್ಥೆಯ ನಡುವೆ ಭಕ್ತರ ಮೊದಲ ತಂಡವು ಜಮ್ಮುವಿನಿಂದ (Jammu) ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (LG) ಮನೋಜ್ ಸಿನ್ಹಾ(Manoj Sinha) ಅವರು ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಲ್ಲಿ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿದರು.
ಮೊದಲ ಬ್ಯಾಚ್‌ನಲ್ಲಿ ಒಟ್ಟು 4,822 ಭಕ್ತರು ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ 3,707 ಪುರುಷರು, 816 ಮಹಿಳೆಯರು, 16 ಮಕ್ಕಳು ಹಾಗೂ 283 ಸಾಧು-ಸಾಧ್ವಿಯರು ಸೇರಿದ್ದಾರೆ.
#WATCH | Jammu and Kashmir Lieutenant Governor Manoj Sinha performs a Puja before flagging off the first batch of Shri Amarnathji Yatra 2006 pilgrims pic.twitter.com/FEG0LQDoHa
— ANI (@ANI) July 1, 2026
ಭಕ್ತರು ಒಟ್ಟು 259 ಲಘು ಮತ್ತು ಭಾರಿ ವಾಹನಗಳ (ಬಸ್ ಹಾಗೂ ಖಾಸಗಿ ವಾಹನಗಳು) ಬೆಂಗಾವಲು ಪಡೆಯಲ್ಲಿ ಕಾಶ್ಮೀರದತ್ತ ತೆರಳಿದ್ದಾರೆ. ಇವರಲ್ಲಿ 2,510 ಯಾತ್ರಿಕರು ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗವನ್ನು ಆರಿಸಿಕೊಂಡಿದ್ದರೆ, 2,312 ಭಕ್ತರು ಕಡಿದಾದ ಬಲ್ತಾಲ್ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: 30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ
ಈ ವರ್ಷದ ಅಮರನಾಥ ಯಾತ್ರೆಯು ಅಧಿಕೃತವಾಗಿ 57 ದಿನಗಳ ಕಾಲ ನಡೆಯಲಿದ್ದು, ಜುಲೈ 3 ರಿಂದ ಆರಂಭಗೊಂಡು ಆಗಸ್ಟ್ 28 ರ ರಕ್ಷಾಬಂಧನದ ದಿನದಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ 3.90 ಲಕ್ಷಕ್ಕೂ ಹೆಚ್ಚು ಭಕ್ತರು ಯಾತ್ರೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ.
