ಬೆಂಗಳೂರು/ರಾಮನಗರ: ಕಲ್ಲು ಕ್ವಾರಿಯಲ್ಲಿ (Stone Quarry) ಬಂಡೆ ಕುಸಿದು 7 ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ (Madapattana) ಬಳಿ ನಡೆದಿದೆ.
ಕಾವೇರಿ ಕಂಪನಿಗೆ ಸೇರಿದ ಬಂಡೆಯಲ್ಲಿ ಇಂದು ಬೆಳಗ್ಗೆ ಕಾರ್ಮಿಕರು ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದೆ. ಮೇಲೆ ಇಟಾಚಿಯಲ್ಲಿ ಕೆಲಸ ಮಾಡುತ್ತಿತ್ತು. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಬಿದ್ದಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ಆರೋಪ – ಮೂವರು ಸಿಬ್ಬಂದಿಗೆ ನೋಟಿಸ್

100 ಅಡಿಯ ಮೇಲೆ ಹಿಟಾಚಿಯಿಂದ ಕ್ಲೀನ್ ಮಾಡಲಾಗುತ್ತಿತ್ತು. ಹೊಸ ಕ್ರಷರ್ ನಡೆಸಲು ಹಿಟಾಚಿ ಡ್ರೈವರ್ ಸ್ಥಳ ಕ್ಲೀನ್ ಮಾಡುತ್ತಿದ್ದ. ಈ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದನ್ನ ಗಮನಿಸದ ಹಿಟಾಚಿ ಡ್ರೈವರ್‌ನಿಂದ ಅವಘಡ ಆಗಿದೆ ಎನ್ನಲಾಗಿದೆ.
ಎರಡು-ಮೂರು ಕಲ್ಲು ಬಂಡೆಗಳನ್ನ ಹಿಟಾಚಿ ಡ್ರೈವರ್ ಕೆಳಗೆ ತಳ್ಳಿದ್ದಾನೆ. ಕೆಳಗೆ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕರ ತಲೆಯ ಮೇಲೆ ಬಂಡೆ ಬಿದ್ದಿದೆ. ಪರಿಣಾಮ 7 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕಾರ್ಮಿಕರು ಬಿಹಾರದವರು ಎನ್ನಲಾಗಿದೆ. ಇದನ್ನೂ ಓದಿ: ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಮೊಮ್ಮಗನಿಂದಲೇ ಅಜ್ಜಿ ಕೊಲೆ ಕೇಸ್ – ಆರೋಪಿ ಕಾಲಿಗೆ ಗುಂಡೇಟು
