– ಉಕ್ರೇನ್ ದಾಳಿಯಿಂದ ರಷ್ಯಾದಲ್ಲಿ ಇಂಧನ ಕೊರತೆ
ನವದೆಹಲಿ: ಉಕ್ರೇನ್ ದಾಳಿಯಿಂದ ಇಂಧನ ಕೊರತೆ ಎದುರಿಸುತ್ತಿರುವ ರಷ್ಯಾ (Russia) ದೇಶ ಭಾರತದಿಂದಲೇ (India) ಪೆಟ್ರೋಲ್ (Petrol) ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ.
ರಷ್ಯಾದ ಇಂಧನ ಮೂಲಸೌಕರ್ಯದ ಮೇಲೆ ಉಕ್ರೇನ್ ಪದೇ ಪದೇ ಡ್ರೋನ್ ದಾಳಿ ನಡೆಸುತ್ತಿದೆ. ಇದರಿಂದ ರಷ್ಯಾ ದೇಶಾದ್ಯಂತ ಇಂಧನ ಕೊರತೆ ಎದುರಾಗಿದೆ. ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಲ್ಲಿ ಒಂದಾದ ದೇಶವೇ ಈ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂಧನ ರಫ್ತು ಮಾಡುವ ಬದಲು ರಷ್ಯಾ ಈಗ ತಾನೇ ಖರೀದಿ ಮಾಡುತ್ತಿದೆ. ದೇಶೀಯ ಮಾರುಕಟ್ಟೆಯನ್ನು ಪೂರೈಕೆ ಮಾಡುವಂತೆ ವಿದೇಶಗಳನ್ನು ಕೇಳಿಕೊಳ್ಳುತ್ತಿದೆ. ಇದನ್ನೂ ಓದಿ: ಬೆಲ್ಜಿಯಂನಲ್ಲಿ 10 ಅಂತಸ್ತಿನ ಅಪಾರ್ಟ್ಮೆಂಟ್‌ಗೆ ಬೆಂಕಿ; ಹಲವು ಮಂದಿ ಸಾವು ಶಂಕೆ
ರಷ್ಯಾದ 11 ಟೈಮ್ ಝೋನ್‌ಗಳಲ್ಲಿ ಇಂಧನ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಡಿತರ ವ್ಯವಸ್ಥೆ, ಪೆಟ್ರೋಲ್ ಬಂಕ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಅಲ್ಲದೇ, ಹಲವಾರು ಪ್ರದೇಶಗಳಲ್ಲಿ ದಾಖಲೆಯ ಪೆಟ್ರೋಲ್ ಬೆಲೆ ಏರಿಕೆ ವರದಿಯಾಗಿದೆ.
ರಷ್ಯಾ ಈಗಾಗಲೇ ಭಾರತದಿಂದ ಸಮುದ್ರದ ಮೂಲಕ ಪೆಟ್ರೋಲ್ ಆಮದು ಮಾಡಿಕೊಳ್ಳುತ್ತಿದೆ. ಭಾರತದಿಂದ ಕನಿಷ್ಠ 60,000 ಮೆಟ್ರಿಕ್ ಟನ್ ಪೆಟ್ರೋಲ್ ಅನ್ನು ರಷ್ಯಾಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಯಾವ ಭಾರತೀಯ ಸಂಸ್ಕರಣಾಗಾರ ಈ ಇಂಧನವನ್ನು ಪೂರೈಸುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೇಶದಲ್ಲಿನ ಕೊರತೆಯನ್ನು ನೀಗಿಸಲು ಸ್ವೀಕಾರಾರ್ಹ ಬೆಲೆಯಲ್ಲಿ ಇಂಧನ ಖರೀದಿಸುವ ಬಗ್ಗೆ ರಷ್ಯಾ ಹಲವಾರು ದೇಶಗಳೊಂದಿಗೆ ಮಾತನಾಡುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶುದ್ಧ ಚಿನ್ನದಲ್ಲೇ ಒಳ ಉಡುಪು, 146 ಕೋಟಿ ಕ್ಯಾಶ್, ಗೋಪುರದ ರೀತಿ ಹಣ ಸಂಗ್ರಹ – ಜಗತ್ತಿನ ಅತಿದೊಡ್ಡ ಭ್ರಷ್ಟ ಸಂಸದೆ ಲಾಕ್
