ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Attack) ಇಂದಿಗೆ ಒಂದು ವರ್ಷ. ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದ ಭರತ್ ಭೂಷಣ್ (Bharath Bhushan) ಕುಟುಂಬದಲ್ಲಿ ನೀರವ ಮೌನವಿದೆ. ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ (Baisaran Valley) ನಡೆದ ಭೀಕರ ಭಯೋತ್ಪಾದಕ ದಾಳಿಗೆ ಒಂದು ವರ್ಷದ ಕರಾಳ ನೆನಪು. 25 ಪ್ರವಾಸಿಗರು, ಓರ್ವ ಸ್ಥಳೀಯ ಸೇರಿ 26 ಜನ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಈ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಪ್ರತಿಕಾರ ತೀರಿಸಿಕೊಂಡಿತು. ಆದರೆ ಈ ಕರಾಳ ನೆನಪು, ತಮ್ಮವರನ್ನ ಕಳೆದುಕೊಂಡವರಿಗೆ ಪ್ರತಿಕ್ಷಣವೂ ಕಾಡುತ್ತಿದೆ. ಭರತ್ ಭೂಷನ್‌ರನ್ನ ಕಳೆದುಕೊಂಡು, ಪತ್ನಿ, ಪೋಷಕರು ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: 20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!
ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾಗಿದ್ದ ಭರತ್ ಭೂಷಣ್, ಪತ್ನಿ ಡಾ. ಸುಜಾತ ಹಾಗೂ ಮಗು ಜೊತೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಉಗ್ರರು ಭರತ್ ಭೂಷಣ್ ತಲೆಗೆ ಗುಂಡು ಹಾರಿಸಿ ಜೀವ ತೆಗೆದಿದ್ದರು. ಭರತ್ ಭೂಷಣ್ ಮನೆಯಲ್ಲಿ ಇದೀಗ ನೀರವ ಮೌನವಿದ್ದು, ಮಗನನ್ನು ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನ ಕಂಡಿದ್ದ ಮಗ, ಕಣ್ಮುಂದೆಯೇ ಇಲ್ವಾಲ್ಲ ಎಂದು ದುಃಖಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ನರಮೇಧಕ್ಕೆ 1 ವರ್ಷ – ದಾಳಿಯಲ್ಲಿ ಪ್ರಾಣ ತೆತ್ತ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

ಭೂಷಣ್ ನೆನಪಿನಲ್ಲಿಯೇ ಕುಟುಂಬ ಜೀವನ ನಡೆಸುತ್ತಿದೆ. ಕೆಲಸದ ಮಧ್ಯೆ ತನ್ನ ಪತಿಯ ನೆನಪುಗಳನ್ನ ಮರೆಯಲು ಡಾ. ಸುಜಾತ ಪ್ರಯತ್ನಿಸುತ್ತಿದ್ದಾರೆ. ಆದರೂ ಆ ಕರಾಳ ನೆನಪು ಕಣ್ಮುಂದೆಯೇ ಬಂದು ನಿಲ್ಲುತ್ತಿವೆ. ‘ಆಪರೇಷನ್ ಸಿಂಧೂರ’ ಕಾರ್ಯಚರಣೆಯ ಮೂಲಕ ಭಾರತ ಪ್ರತಿಕಾರ ತೀರಿಸಿಕೊಂಡಿದ್ದರೂ, ತಮ್ಮವರನ್ನ ಕಳೆದುಕೊಂಡ ನೋವು ಆ ಮನೆಗಳಲ್ಲಿ ಮರೆಯೋದಕ್ಕೂ ಆಗುತ್ತಿಲ್ಲ. ಇದನ್ನೂ ಓದಿ: ಪಹಲ್ಗಾಮ್ ನರಮೇಧಕ್ಕೆ 1 ವರ್ಷ; ಮಾಸದ ಗಾಯ, ನಿಲ್ಲದ ಕಣ್ಣೀರು – ʻಸಿಂಧೂರ’ ಸಾಂತ್ವನ
ಒಂದು ವರ್ಷ ಕಳೆದಿದ್ದೇ ಗೊತ್ತಾಗಿಲ್ಲ. ಅಷ್ಟು ಬೇಗ ದಿನಗಳು ಮುಂದೆ ಹೋಗಿದೆ. ದಿನ, ಪ್ರತಿಕ್ಷಣ ನೆನಪು ಬರುತ್ತೆ. ಕೆಲಸದಲ್ಲಿ ಬ್ಯುಸಿಯಾಗುತ್ತಾ ಜೀವನ ನಡೆಸ್ಕೊಂಡು ಹೋಗುತ್ತಿದ್ದೇನೆ. ಬಾರ್ಡರ್ ಒಳಗಡೆಯಿಂದ ಬಂದು ಕೃತ್ಯ ಮಾಡುವವರು ಮಾಡುತ್ತಲೇ ಇದ್ದಾರೆ. ಇದು ಯಾವಾಗ ಕಂಪ್ಲೀಟ್ ಆಗಿ ನಿಲ್ಲುತ್ತೋ ಆಗ ಸೇಫ್ ಆಗಿದಿವಿ ಅಂತ ಹೇಳಬಹುದು. ಸೇಫ್ ಆಗಿದಿವಿ ಅಂತನೇ ನಾವು ಕಾಶ್ಮೀರಕ್ಕೆ ಹೋಗಿದ್ದು. ಸೇಫ್ಟಿ ಅನ್ನೋದಕ್ಕೆ ನಂಬಿಕೆ ಹೊರಟೋಗಿದೆ. ಜೀವನದಲ್ಲಿ ಆಸೆಗಳು ಇದ್ದವು. ನಮ್ಮ ಮಧ್ಯದಲ್ಲಿಯೇ ನಡೆದುಕೊಂಡು ಬಂದರು. ಪ್ರವಾಸಿಗರು, ಅಲ್ಲಿ ಕೆಲಸ ಮಾಡುವವರು ತರ ಅದೇ ಡ್ರೆಸ್‌ನಲ್ಲಿ ಬಂದರು. ಗನ್ ತೆಗೆದು ಶೂಟ್ ಮಾಡಿದ್ರು. ಅವನು ಯಾವನು ಅಂತ ಗೊತ್ತಾಯ್ತು. ಅವನ ತಲೆಗೆ ಗುಂಡು ಹಾಕಲಿಲ್ಲ. ನಮ್ಮ ಭಾವನ ತಲೆ ಹೊಡೆದವರ ತಲೆ ಹೊಡೆಯಲಿಲ್ಲ ಅನ್ನೋ ಬೇಸರವಿದೆ. ಯಾವನು ನಮ್ಮ ಭಾವನ ಹತ್ರ ಬಂದು ಸುಟ್ನೋ ಅವನು ಸತ್ತ. ಆ ಫೋಟೋವನ್ನ ನೋಡಿದೆ. ಅವನೇ ಅಂತ ನನಗೆ ಗೊತ್ತಾಯ್ತು. ಪಹಲ್ಗಾಮ್‌ಗೆ ಬೆಳಗ್ಗೆ ತಲುಪಿದ್ವಿ. ಸ್ವಲ್ಪ ವೇಟ್ ಮಾಡೋಣ. ಕೆಳಗೆ ನದಿ ಇತ್ತು. ಆಡ್ಕೊಂಡು ಹೋಗೋಣ, ಊಟಕ್ಕೆ ಟೈಂ ಆಯ್ತು ಹೋಗೋಣ ಅಂದುಕೊಂಡಿದ್ದೆ. ಒಂದು ನಿಮಿಷ ಆಗಿದ್ರೂ ಬಾರ್ಡರ್, ಫೆನ್ಸ ಹತ್ರ ಹೋಗುತ್ತಿದ್ದೆವು. ಪ್ರತಿಕ್ಷಣನೂ ಮನಸಲ್ಲಿ ಇದು ಓಡುತ್ತೆ. ಮಗು, ಬ್ಯಾಗ್‌ನ ಇಟ್ಟುಕೊಂಡು ನಾನು ಓಡಿಕೊಂಡು ಬರುತ್ತಿದ್ದೆ. ಆ ನೆನಪು ಇನ್ನೂ ಇದೆ. ಮದುವೆ ಆಗಿ ಆರು ವರ್ಷ ಇದ್ದೆ. ಮಗ, ಅಣ್ಣ ಅವರ ಮನಸ್ಸಲ್ಲಿ ಬೇಜಾರು ಇದೆ. ಈ ಥರ ಸಾವು ಯಾರಿಗೂ ಬರಬಾರದು. ಅವರು ಯಾರಿಗೂ ತೊಂದರೆ ಕೊಟ್ಟವರಲ್ಲ. ಪ್ರವಾಸಕ್ಕೆ ತೆರಳುವವರಿಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ಭರತ್ ಭೂಷಣ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ನರಮೇಧ ನಡೆದ ಬೈಸರನ್ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?



