- ಪೊಲೀಸರಿಗೆ ಶರಣಾದ ಆರೋಪಿ
ಮಂಗಳೂರು: ಕಾಲೇಜಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ (Student) ಯುವಕನೊಬ್ಬ ಚಾಕು ಇರಿದ ಪ್ರಕರಣ ಬಂಟ್ವಾಳ ತಾಲೂಕಿನ ಇರಾದಲ್ಲಿ ನಡೆದಿದೆ.
ಬಂಟ್ವಾಳದ ಮೊಂತಿಮಾರ್ ಪಡ್ಪುವಿನ ವ್ಯಾಪಾರಿ ಜವ್ವರ್ (28) ಚಾಕು ಇರಿದ ಆರೋಪಿ. ಪ್ರೀತಿ (Love) ವಿಚಾರದಲ್ಲಿ ಇಬ್ಬರ ನಡುವೆ ಆದ ಗಲಾಟೆಯೇ ಚಾಕು ಇರಿತಕ್ಕೆ ಕಾರಣ ಎನ್ನಲಾಗಿದೆ. ಚಾಕು ಇರಿದು ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಚಾಕು ಇರಿತದಿಂದ ಯುವತಿಯ ಕೈಗೆ ಗಾಯವಾಗಿದೆ. ತೀವ್ರ ರಕ್ತ ಸ್ರಾವವಾಗಿ ಬಸ್ ನಿಲ್ದಾಣದ ತುಂಬಾ ರಕ್ತ ಚೆಲ್ಲಿದೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
