-ಪ್ರವಾಸೋದ್ಯಮ ಇಲಾಖೆಯ ಲೋಗೋ ಬಿಡುಗಡೆ ಮಾಡಿದ ಸಿಎಂ, ಡಿಸಿಎಂ
ಬೀದರ್: ಗ್ಯಾರಂಟಿ ಮಾತ್ರವಲ್ಲದೆ ಮಹಿಳೆಯರಿಗಾಗಿ ಹತ್ತಾರು ಯೋಜನೆ ಜಾರಿಗೊಳಿಸಲಿದ್ದೇವೆ, ನಿಮ್ಮ ಜೊತೆಗೆ ಡಿಕೆಶಿ ಹಾಗೂ ಸರ್ಕಾರ ಸದಾ ಇರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಭರವಸೆ ನೀಡಿದರು.
ಬಸವಕಲ್ಯಾಣದಲ್ಲಿ (Basava Kalyana) ಆಯೋಜಿಸಲಾಗಿದ್ದ ಅಕ್ಕಪಡೆ ಮಹಿಳಾ ಶಕ್ತಿ ಪ್ರದರ್ಶನ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಮತ್ತು ಡಿಸಿಎಂ ಜಿ.ಪರಮೇಶ್ವರ್ (G Parameshwar) ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನೂತನ ಲೋಗೋವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಕ್ಕಪಡೆಯಿಂದ ರೋಮಾಂಚನಕಾರಿ ಮಹಿಳಾ ಶಕ್ತಿ ಪ್ರದರ್ಶನ ಮತ್ತು ಎದುರಾಳಿಗಳಿಂದ ತಮ್ಮನ್ನು ತಾವು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಆತ್ಮರಕ್ಷಣೆಯ ಬಗ್ಗೆ ಪ್ರದರ್ಶನ ನೀಡಿದರು. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ
ಶರಣರ ಪವಿತ್ರ ಕರ್ಮಭೂಮಿ ಬಸವಕಲ್ಯಾಣದ ಮಣ್ಣಿನ ಕಣಕಣದಲ್ಲೂ ಆ ಹನ್ನೆರಡನೇ ಶತಮಾನದ ವೈಚಾರಿಕ ಕ್ರಾಂತಿಯ ಸದ್ದು ಇಂದಿಗೂ ಅನುರಣಿಸುತ್ತಿದೆ. ಜಗತ್ತಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಮಾನತೆಯ ತಳಹದಿಯ ಮೇಲೆ ಬಸವಣ್ಣನವರು ಕಟ್ಟಿದ ವಿಶ್ವದ ಮೊದಲ ಆಧ್ಯಾತ್ಮಿಕ ಸಂಸತ್ತು ಈ ಅನುಭವ ಮಂಟಪ.
ಅಲ್ಲಮಪ್ರಭುಗಳ ಜ್ಞಾನದ ಔನ್ನತ್ಯ, ಅಕ್ಕಮಹಾದೇವಿಯ… pic.twitter.com/TVQo516IDA
— CM of Karnataka (@CMofKarnataka) July 6, 2026
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಾರಿ ಶಕ್ತಿ ಮತ್ತಷ್ಟು ವೃದ್ಧಿಸಲಿದೆ. ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಈ ರೀತಿಯ ಪಡೆಯನ್ನು ರಚಿಸಲು ಆದೇಶ ಹೊರಡಿಸಲಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ ಮೂಲಕ ನಾರಿ ಶಕ್ತಿಗೆ ಬಲ ತುಂಬಲಾಗುತ್ತಿದೆ. ಮಹಿಳೆಯರಿಗಾಗಿ ಗ್ಯಾರಂಟಿ ಮಾತ್ರವಲ್ಲದೆ ಹತ್ತಾರು ಇತರ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ. ನಿಮ್ಮ ಜೊತೆಗೆ ಡಿಕೆಶಿ ಮತ್ತು ಈ ಸರ್ಕಾರ ಸದಾ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಣ್ಣು ಈ ಸಮಾಜದ ಕಣ್ಣು. ಹೆಣ್ಣು ಎಂದರೆ ಭೂಮಿ, ಭರವಸೆ, ಒಗ್ಗಟ್ಟು, ಶಕ್ತಿ ಮತ್ತು ಬೆಳಕು ಇದ್ದಂತೆ. ನಾರಿ ಶಕ್ತಿಯೇ ಈ ದೇಶದ ಅಸಲಿ ಶಕ್ತಿ. ನಮ್ಮ ಸಂಸ್ಕೃತಿಯಲ್ಲಿ ನಾವು `ಮಾತೃ ದೇವೋ ಭವ’ ಎಂದು ಗೌರವಿಸುತ್ತೇವೆ. ಹೆಣ್ಣುಮಕ್ಕಳು ಕೇವಲ ಮನೆಯೊಳಗಿರದೆ, ಮುಂಬರುವ ದಿನಗಳಲ್ಲಿ ನೀವು ನಾಯಕರಾಗಬೇಕು ಹಾಗೂ ಗ್ರಾಮ ಪಂಚಾಯಿತಿಗಳ ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: SIR ಕರ್ತವ್ಯ ವೇಳೆ ಕುಸಿದು ಬಿದ್ದು ಬಿಎಲ್‌ಒ ಸಾವು
ಬಸವಕಲ್ಯಾಣದಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಜಗದ್ಗುರು ಬಸವೇಶ್ವರ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರರ ಪ್ರತಿಮೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್,… pic.twitter.com/G8aiB65992
— CM of Karnataka (@CMofKarnataka) July 6, 2026
ಬಸವಣ್ಣನ ಕರ್ಮಭೂಮಿಯಿಂದಲೇ ಬರ ಪ್ರವಾಸದ ಆರಂಭ:
ಇದೇ ಸಂದರ್ಭದಲ್ಲಿ ಸರ್ಕಾರದ ಬರ ವೀಕ್ಷಣೆ ಪ್ರವಾಸದ ಕುರಿತು ಮಾತನಾಡಿದ ಅವರು, ಸರ್ಕಾರದ ಭರದ ಪ್ರವಾಸವನ್ನು ಬಸವಣ್ಣನ ಕರ್ಮಭೂಮಿಯಾದ ಬಸವಕಲ್ಯಾಣದಿಂದಲೇ ಆರಂಭಿಸುತ್ತಿದ್ದೇನೆ. ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಂದ ಈ ಪ್ರವಾಸ ಮುಂದುವರಿಯಲಿದೆ ಎಂದರು.
ಇದೇ ವೇದಿಕೆಯಲ್ಲಿ ಪಾವತಿ ಖಾತೆಯ ಅಭಿಯಾನದ ಅಂಗವಾಗಿ ಹತ್ತು ಜನ ಫಲಾನುಭವಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕೃತವಾಗಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾವಿರಾರು ಮಹಿಳೆಯರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.ಇದನ್ನೂ ಓದಿ: `ಮಹಾ’ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆ – ಹಲವೆಡೆ ಭೂಕುಸಿತ, ಮುಂಬೈ-ಪುಣೆ ರೈಲ್ವೆ ಸಂಚಾರ ಸ್ಥಗಿತ
