ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ (Male Mahadeshwara Hill) ಸಮೀಪದ ಇಂಡಿಗನತ್ತ ಗ್ರಾಮದ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ನಿನ್ನೆಯಷ್ಟೇ ಒಂದು ಚಿರತೆ ಬಿದ್ದಿದೆ. ಈ ಬೆನ್ನಲ್ಲೇ ನಾಗಮಲೆ (Nagamale) ಗ್ರಾಮದಲ್ಲಿ ಮತ್ತೆ ಚಿರತೆ (Leopard) ದಾಳಿ ನಡೆದಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಿಸಿದೆ.
ಮಲೆ ಮಹದೇಶ್ವರ ಬೆಟ್ಟ ಸಮೀಪದ ನಾಗಮಲೆ ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಮೇಕೆಯೊಂದು ಬಲಿಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ನಿಷೇಧಿಸಲಾಗಿದ್ದ ಜಮಾತ್-ಎ-ಇಸ್ಲಾಮಿ ಸಂಘಟನೆ ಪುನಶ್ಚೇತನಕ್ಕೆ ಯತ್ನ – ಕಾಶ್ಮೀರದ ಹಲವೆಡೆ NIA ದಾಳಿ
ಇಂಡಿಗನತ್ತ ಗ್ರಾಮದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ನಾಗಮಲೆ ಗ್ರಾಮದಲ್ಲಿ ಚಿರತೆ ಸಂಚಾರ ಮುಂದುವರಿದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಭಾರೀ ವ್ಯತ್ಯಯ – ಪಬ್ಲಿಕ್ ಟಿವಿ ಪ್ರಶ್ನೆಗೆ ಮುನಿಯಪ್ಪ ತರಲೆ ಉತ್ತರ!
ಇತ್ತೀಚೆಗೆ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿದಿತ್ತು. ಆದರೆ ಬೋನಿಗೆ ಬಿದ್ದಿದ್ದ ಚಿರತೆಯೇ ನಾಗಮಲೆ ಮಾರ್ಗ ಮಧ್ಯದಲ್ಲಿ ಬೆಂಗಳೂರು ಮೂಲದ ಬಾಲಕನನ್ನು ಬಲಿ ಪಡೆದ ಚಿರತೆಯೋ ಅಥವಾ ಮತ್ತೊಂದು ಚಿರತೆಯೋ ಎಂಬ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಈ ನಡುವೆಯೇ ಮತ್ತೊಮ್ಮೆ ಚಿರತೆ ದಾಳಿ ನಡೆಸಿ ಮೇಕೆಯನ್ನು ಕೊಂದಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು ಕೇಸ್ – ಗುತ್ತಿಗೆದಾರ ಕಂಪನಿ ವಿರುದ್ಧ FIR
ಘಟನೆ ಬಳಿಕ ಮಲೆ ಮಹದೇಶ್ವರ ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಮತ್ತೆ ಚಿರತೆ ಭಯ ಶುರುವಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ತಕ್ಷಣವೇ ಚಿರತೆ ಸೆರೆ ಕಾರ್ಯಾಚರಣೆ ಮುಂದುವರಿಸಿ, ಪ್ರದೇಶದಲ್ಲಿ ಹೆಚ್ಚುವರಿ ನಿಗಾ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೇಡುತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಸಂತ್ರಸ್ತೆ ಮೇಲೆ ರೇಪ್ – ಮತ್ತೆ ಜೈಲು ಸೇರಿದ ಆರೋಪಿ
