ಗದಗ: ಕಂಪ್ಯೂಟರ್ ಕ್ಲಾಸ್‌ಗೆ (Computer Class) ಹೋಗಿದ್ದ ಬಾಲಕಿಯನ್ನ ಪುಸಲಾಯಿಸಿ, ಅಪಹರಿಸಿ ಅತ್ಯಾಚಾರ ನಡೆಸಿರುವ ಪ್ರಕರಣ ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ (Laxmeshwar Police Station) ವ್ಯಾಪ್ತಿಯಲ್ಲಿ ನಡೆದಿದೆ.
17 ವರ್ಷ 5 ತಿಂಗಳ ಬಾಲಕಿ ಮೇಲೆ ಅಲ್ಲಾಭಕ್ಷಿ ಕೊಪ್ಪದ ಎಂಬ ಆರೋಪಿ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪವಿದೆ. ಎರಡು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಮೇಲೆ ಆರೋಪಿ 2ನೇ ಬಾರಿಗೆ ಅತ್ಯಾಚಾರ ಎಸಗಿದ್ದಾಗಿ ಪ್ರಕರಣ (Rape Case) ದಾಖಲಾಗಿದೆ. ಇದನ್ನೂ ಓದಿ: ಧಾರವಾಡದಲ್ಲಿ ಬೆಚ್ಚಿಬೀಳಿಸುವ ಘಟನೆ; ಬಾಲಕಿ ಮೇಲೆ ಅತ್ಯಾಚಾರ – ಖಾಜಾಸಾಬ್ ವಿರುದ್ಧ ಕೇಸ್

ಈ ಹಿಂದೆ 2025 ರಲ್ಲಿ ಇದೆ ಬಾಲಕಿಯಿಂದ, ಇದೇ ಆರೋಪಿ ಮೇಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗ ಆರೋಪಿ ಅಲ್ಲಾಭಕ್ಷಿ ಪೋಕ್ಸೋ ಕೇಸ್ ಮೇಲೆ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ನಂತರ ಸೇಡು ತೊರಿಸಿಕೊಳ್ಳಲು ಆರೋಪಿಪಿ ಅದೇ ಸಂತ್ರಸ್ತೆ ಮೇಲೆ 2ನೇ ಬಾರಿ ಕೃತ್ಯ ಎಸಗಿದ್ದಾನೆ.
ಮೇ 23 ರಂದು ಬಾಲಕಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂಪ್ಯೂಟರ್ ಕ್ಲಾಸ್ ಗೆ ಹೋಗುತ್ತಿದ್ದಳು, ಆಕೆಯನ್ನ ಹಿಂಬಾಲಿಸಿ ಪೋಸ್ಟ್ ಆಫೀಸ್ ಬಳಿ ಬಂದು ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ ಎಂದು ಆರೋಪಿ ಅಲ್ಲಾಭಕ್ಷಿ ಹಾಗೂ ಆತನ ಸ್ನೇಹಿತ ಆಸೀಫ್ ನದಫ್ ಎಂಬ ಇಬ್ಬರು ಬಲವಂತವಾಗಿ ಗೂಡ್ಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಲಕ್ಷ್ಮೇಶ್ವರ ಪಟ್ಟಣ ಹೊರವಲಯದ ಜಮೀನೊಂದರಲ್ಲಿ ಕರೆದೊಯ್ದು ಅಲ್ಲಾಭಕ್ಷಿ ಅತ್ಯಾಚಾರ ನಡೆಸಿದ್ದಾನೆ.
ಸಂತ್ರಸ್ತೆ ಕುಟುಂಬಸ್ಥರಿಂದ ಅಲ್ಲಾಭಕ್ಷಿ ಹಾಗೂ ಆಸೀಫ್ ಎಂಬ ಇಬ್ಬರ ಮೇಲೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಲಕ್ಷ್ಮೇಶ್ವರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: 700 ಅಡಿ ಕಂದಕಕ್ಕೆ ಉರುಳಿದ ಸ್ಕಾರ್ಪಿಯೋ – ಮಹಾಬಲೇಶ್ವರಕ್ಕೆ ತೆರಳಿದ್ದ 8 ಮಂದಿ ದುರ್ಮರಣ
