– ಮೊಬೈಲ್‌ನಲ್ಲಿ ಬಾಲಕಿ ಜೊತೆಗಿನ ಖಾಸಗಿ ಫೋಟೋ ಪತ್ತೆ
ಧಾರವಾಡ: ಅಪ್ರಾಪ್ತ ಬಾಲಕಿ ಮೇಲೆ ದುರುಳನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಧಾರವಾಡದ (Dharwad) ಬಡಾವಣೆಯೊಂದರಲ್ಲಿ ನಡೆಸಿದೆ.
9ನೇ ತರಗತಿಯಲ್ಲಿ ಓದುತಿದ್ದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುರುಳ ಖಾಜಾಸಾಬ್ ಪಠಾಣ್ ವಿರುದ್ಧ ವಿದ್ಯಾಗಿರಿ ಠಾಣೆಯಲ್ಲಿ (Vidyagiri Police Station) ಪೋಕ್ಸೋ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ತೈಲ ಶಾಕ್ – ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ದರ ಏರಿಕೆ ಹೇಗಿದೆ?

ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಖಾಜಾಸಾಬ್, ಆಕೆಯನ್ನ ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಖಾಜಾಸಾಬ್‌ನನ್ನ ಹಿಡಿದು ವಿಚಾರಿಸಿದ್ದಾರೆ. ಆತನ ಮೊಬೈಲ್ ಪರಿಶೀಲಿಸಿದಾಗ, ಮೊಬೈಲ್‌ನಲ್ಲಿ ಬಾಲಕಿ ಜೊತೆಗಿನ ಕೆಲ ಖಾಸಗಿ ಫೋಟೋಗಳು ಪತ್ತೆಯಾಗಿದೆ. ಸದ್ಯ ಖಾಜಾಸಾಬ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಟ್ಕಳ ನದಿ ದುರಂತ – ಸಾವಿನ ಸಂಖ್ಯೆ 11ಕ್ಕೆ ಏರಿಕೆ
