ಬೆಂಗಳೂರು: ಒಡವೆ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ದರೋಡೆಗೆ ಯತ್ನಿಸಿದ ಕಳ್ಳನ ಲಾಂಗ್‍ನನ್ನು ಮಾಲೀಕನೇ ಕಿತ್ತು ಕಳುಹಿಸಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.
Advertisement
ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಲಾಂಗ್ ತೆಗೆದುಕೊಂಡು ನೇರವಾಗಿ ಅಂಗಡಿಗೆ ನುಗ್ಗಿ, ಮಾಲೀಕನಿಗೆ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಆತಂಕಗೊಂಡ ಮಾಲೀಕ ಹಣ ನೀಡಲು ಮುಂದಾಗಿದ್ದಾನೆ. ಈ ವೇಳೆ ಹಣದ ಪೆಟ್ಟಿಗೆಗೆ ಆರೋಪಿಯೇ ಕೈ ಹಾಕಿ ಹಣ ದೋಚಲು ಯತ್ನಿಸಿದಾಗ, ಆತನ ಕೈಯಲ್ಲಿದ್ದ ಲಾಂಗ್‍ನನ್ನು ಅಂಗಡಿ ಮಾಲೀಕ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಿರುಚಾಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ
Advertisement
Advertisement
ಈ ವೇಳೆ ಸ್ಥಳದಲ್ಲಿಯೇ ನಿಂತಿದ್ದ ಪೌರ ಕಾರ್ಮಿಕ ಮಹಿಳೆ ಆರೋಪಿ ಕೈಯಲ್ಲಿ ಲಾಂಗ್ ಇದ್ದರೂ, ಹೆದರದೇ ಪೊರಕೆಯಲ್ಲಿ ಹೊಡೆಯಲು ಮುಂದಾಗಿದ್ದಾಳೆ. ಇದರಿಂದ ಭಯಭೀತನಾಗಿ ಆರೋಪಿ ವಾಹನದಲ್ಲಿ ಪರಾರಿಯಾಗಿದ್ದಾನೆ.
Advertisement
ಸದ್ಯ ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಸಿದ್ಧಿಕ್ ಎಂದು ಗುರುತಿಸಲಾಗಿದೆ. ಇದೀಗ ಪುಲಕೇಶಿ ನಗರದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ