ಪಾಟ್ನಾ: 11 ವರ್ಷದ ಬಾಲಕನೋರ್ವ ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕವಾಗಿ ಮನವಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ನಿತೀಶ್ ಕುಮಾರ್ ಅವರು ತಮ್ಮ ಪತ್ನಿ ಮಂಜು ಸಿನ್ಹಾ ಅವರ ಪುಣ್ಯತಿಥಿಗೆಂದು ಕಲ್ಯಾಣ್ ಬಿಗಾಹಕ್ಕೆ ಬಂದಿದ್ದರು. ಜೊತೆಗೆ ಉದ್ಯಾನವನದಲ್ಲಿದ್ದ ತಮ್ಮ ತಂದೆ ಕವಿರಾಜ್ ರಾಮ್ಲಖಾನ್ ಸಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬ್ಯಾರಿಕೇಡ್‍ನ ಹಾದಿಯಲ್ಲಿ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದರು. ಈ ವೇಳೆ ಅನೇಕ ಮಂದಿ ತಮ್ಮ ಸಮಸ್ಯೆಗಳನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿದ್ದಾಗ ಅವರ ಮನವಿಗಳನ್ನು ಸಿಎಂ ಸ್ವೀಕರಿಸುತ್ತಿದ್ದರು. ಈ ಮಧ್ಯೆ ಎಲ್ಲರನ್ನು ನೋಡುತ್ತಾ ಅಲ್ಲಿಯೇ ನಿಂತಿದ್ದ ಬಾಲಕನನ್ನು ನಿತೀಶ್ ಕುಮಾರ್ ಅವರು ಕರೆದಿದ್ದಾರೆ.
ನಂತರ ಸೋನು ಕುಮಾರ್(ಬಾಲಕ) ಸರ್.. ನನ್ನ ಶಿಕ್ಷಣಕ್ಕೆ ನಿಮ್ಮ ಬೆಂಬಲ ಬೇಕು. ನನ್ನ ತಂದೆ ನನಗೆ ಸಹಾಯ ಮಾಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾನೆ. ಬಳಿಕ ಮುಖ್ಯಮಂತ್ರಿಗಳು ತಮ್ಮ ಜೊತೆಗಿದ್ದ ಅಧಿಕಾರಿಗಳಿಗೆ ಬಾಲಕನ ಸಮಸ್ಯೆಯನ್ನು ಆಲಿಸಿ ಆತನ ಕೋರಿಕೆಯನ್ನು ಈಡೇರಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ಉತ್ತಮ ರೀತಿಯಲ್ಲಿ ಬೋಧನೆ ಮಾಡಲಾಗುತ್ತಿಲ್ಲ. ನನ್ನ ಗಣಿತ ಶಿಕ್ಷಕರಿಗೆ ಲೆಕ್ಕವನ್ನು ಹೇಳಿಕೊಡಲು ಬರುವುದಿಲ್ಲ ಮತ್ತು ಇಂಗ್ಲಿಷ್ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಬಾಲಕ ಜಿಲ್ಲಾಧಿಕಾರಿ, ಡೆಪ್ಯುಟಿ ಡೆವಲಪ್‍ಮೆಂಟ್ ಕಮಿಷನರ್ ವೈಭವ್ ಶ್ರೀವಾಸ್ತವ್ ತಿಳಿಸಿದ್ದಾನೆ.
ನಾನು ಸಿವಿಲ್ ಸರ್ವೀಸ್‍ಗೆ ಸೇರಬೇಕೆಂಬ ಆಸೆಯನ್ನು ಹೊಂದಿದ್ದೇನೆ, ಆದರೆ ಕಳಪೆ ಶಿಕ್ಷಣ ಮತ್ತು ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಇರುವುದರಿಂದ ಓದಲು ಆಗುತ್ತಿಲ್ಲ. ನನ್ನ ತಂದೆ ಡೈರಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ ನನ್ನ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಲ್ಲದೇ ಅವರು ಸಂಪಾದಿಸಿದರೂ, ಮದ್ಯ ಸೇವಿಸುವ ಮೂಲಕ ಹಣವನ್ನೆಲ್ಲಾ ಹಾಳು ಮಾಡುತ್ತಾರೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ
ಬಿಹಾರದಲ್ಲಿನ ಪ್ರಾಥಮಿಕ ಶಿಕ್ಷಣ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕವಾಗಿ ಟೀಕಿಸಿದ್ದು, ಬಾಲಕನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಕಾಮೆಂಟ್ ಮಾಡುತ್ತಿದ್ದಾರೆ.