ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ (Guarantee Scheme) ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ ಸಚಿವ ಶ್ರೀರಾಮುಲು (Sri Ramulu) ಆರೋಪ ಮಾಡಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಗೆ ಕತ್ತರಿ ಹಾಕಿರೋ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಗ್ಯಾರಂಟಿ ವಿಚಾರದಲ್ಲಿ ಪರಿಷ್ಕಣೆ ಮಾಡೋ ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಬಂದ್ ಮಾಡೋ ಹುನ್ನಾರ ಈ ಸಿಎಂ ಮಾಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಹೆಸರು ಪ್ರಸ್ತಾಪ ಆದ ಕೂಡಲೇ ಕ್ರಿಮಿನಲ್ ಅಲ್ಲ: ಪ್ರಿಯಾಂಕ್ ಖರ್ಗೆ
ಡಿಕೆ ಶಿವಕುಮಾರ್ ಅವರಿಗೆ ಏನ್ ಹೇಳಬೇಕೋ ಗೊತ್ತಾಗ್ತಿಲ್ಲ. ಸಿದ್ದರಾಮಯ್ಯ ಕೊಟ್ಟ ಯೋಜನೆ ವಿರುದ್ಧ ಇದ್ದಾರಾ ಅಂತ ಸ್ಪಷ್ಟನೆ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಮೃತರ ಹೆಸರಿಗೆ ಹೋಗಿ ಅಂತಾರೆ. ಸಿದ್ದರಾಮಯ್ಯ ಸರ್ಕಾರ ಸರಿ ಇರಲಿಲ್ಲ ಅಂತ ಡಿಕೆಶಿ ಹೇಳೋಕೆ ಹೊರಟಿದ್ದಾರಾ ಗೊತ್ತಿಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಬೇಕಾ? ಎಂಬ ಗೊಂದಲದಲ್ಲಿ ಡಿಕೆಶಿವಕುಮಾರ್ ಇದ್ದಾರೆ ಅಂತ ಕಿಡಿಕಾರಿದರು.

ಇವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲಾ ಗ್ಯಾರಂಟಿ ಕೊಡ್ತೀವಿ ಅಂತ ಹೇಳಿ ಎಲ್ಲರಿಗೂ ಕೊಡ್ತೀವಿ ಅಂದರು. ಕಾಕಾ ಪಾಟೀಲ್, ಮಹದೇವಪ್ಪಗೆ ಫ್ರೀ ಅಂದು ಅಧಿಕಾರಕ್ಕೆ ಬಂದು ಇವತ್ತು ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನರು ಗ್ಯಾರಂಟಿ ಕೊಡಿ ಅಂತ ಕೇಳಲಿಲ್ಲ. ನಿಮ್ಮ ಸ್ವಾರ್ಥಕ್ಕೆ ಗ್ಯಾರಂಟಿ ತಂದ್ರಿ. ಇವತ್ತು ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಬಂದ್ ಮಾಡೋಕೆ ಹೊರಟಿದ್ದೀರಾ? ನೀವು ರಾಜ್ಯದ ಮಹಿಳೆಯರ ಮುಂದೆ ಕ್ಷಮೆ ಯಾಚನೆ ಮಾಡಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಕೊಲ್ಲೂರಿಗೆ ಸಿಎಂ ವಿಜಯ್ ಬರ್ತಿದ್ದಾರೆ ಅನ್ನೋ ಕಾರಣಕ್ಕೆ ವಿಶೇಷ ಪೂಜೆಗಳೇನು ಇರಲ್ಲ: ಅರ್ಚಕ ನಿತ್ಯಾನಂದ ಅಡಿಗ

ನಾನು ತಿಂದ ಮೇಲೆ ಜನಕ್ಕೆ ಅನ್ನೋದನ್ನ ತೋರಿಸಿದ್ದಾರೆ
ಎಲೆಕ್ಷನ್ ಗೆದ್ದ ಮೇಲೆ ದುರ್ಬಳಕೆ ಆಗಿದೆ ಅಂತಿದ್ದೀರಾ. ಸದನದಲ್ಲಿ 2 ತಿಂಗಳ ಹಣ ಗೃಹಲಕ್ಷ್ಮಿ ಹಣ ಕೊಟ್ಟಿಲ್ಲ ಅಂತ ಹೇಳಿದ್ರಿ. ಜನರಿಗೆ ಈ ಹಣ ಬಂದಿಲ್ಲ. ಸಿದ್ದರಾಮಯ್ಯ- ಡಿಕೆಶಿ ನಡುವೆ ಶೀಥಲ ಸಮರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಕನಕಪುರದಲ್ಲಿ ಆಪಲ್ ಕಚ್ಚಿ ಜನರಿಗೆ ಎಸೆದ್ರು. ಅವರ ಸ್ಟೈಲ್ ನೋಡಿದ್ರೆ ರಾಜ್ಯದ ಜನ ಮುಂದೆ ನಾನು ತಿಂದ ನಂತರ ರಾಜ್ಯದ ಜನರಿಗೆ ಉಳಿದಿದ್ದು ಅಂತ ತೋರಿಸಿದ್ದಾರೆ ಅಂತ ಡಿಕೆಶಿ ವಿರುದ್ದ ರಾಮುಲು ಕಿಡಿಕಾರಿದರು. ಇದನ್ನೂ ಓದಿ: ಪೋಕ್ಸೊ ಕೇಸ್| ವಚನಾನಂದ ಸ್ವಾಮೀಜಿ ವಿರುದ್ಧ 410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
