– ಧರ್ಮಸ್ಥಳ ಸಂಘ ಕೂಡ ಮೈಕ್ರೋ ಫೈನಾನ್ಸ್ ಕಾಯ್ದೆ ಪಾಲಿಸಬೇಕು
ಬೆಂಗಳೂರು: ಧರ್ಮಸ್ಥಳ ಬುರುಡೆ (Dharmasthala Mass Burial Case) ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಕೋರ್ಟ್ ಎಸ್‌ಐಟಿ ಚೀಫ್‌ಗೆ ಕೇಳಿದೆ, ಅವರು ಉತ್ತರ ಕೊಡಲಿ. ಮಾಧ್ಯಮಗಳಲ್ಲಿ ಚರ್ಚೆ ಮಾಡೋಕೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಎಕ್ಸ್ ಪೋಸ್ಟ್‌ನಲ್ಲಿ ನಟ ಸ್ಪಷ್ಟನೆ

ಇನ್ನೂ ಮೈಕ್ರೋ ಫೈನಾನ್ಸ್ ಕಾಯ್ದೆ (Micro Finance Act) ಧರ್ಮಸ್ಥಳ ಸಂಘ ಪಾಲನೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಯ್ದೆ ಇಡೀ ರಾಜ್ಯಕ್ಕೆ ತಂದುರೋದು. ಹೊಸ ಕಾಯ್ದೆ ಬಂದ ಮೇಲೆ ಯಾರು ಉಲ್ಲಂಘನೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಒಂದು ವಾರ, 10 ದಿನಗಳಲ್ಲಿ ಮೀಟಿಂಗ್ ಮಾಡಿ ತಿಳಿಸ್ತೀನಿ. ಧರ್ಮಸ್ಥಳ ಸಂಘಕ್ಕೆ ಮಾತ್ರವಲ್ಲ ಆ ಕಾಯ್ದೆ ಅಲ್ಲ. ಎಲ್ಲರಿಗೂ ಅನ್ವಯ ಆಗುತ್ತದೆ. ಪಾಲನೆ ಮಾಡಬೇಕು. ದೂರು ಏನಿದೆ ಗೊತ್ತಿಲ್ಲ. ತನಿಖೆ ಆಗಬೇಕು. ಅದರ ಬಗ್ಗೆ ಪರಿಶೀಲನೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ 200 ಕೋಟಿ ಷಡ್ಯಂತ್ರ – ಚಿನ್ನಯ್ಯನಿಗೆ ಕರೆ ಮಾಡಿ ಅಪ್ಪಿಕೊಳ್ಳುತ್ತೇನೆ ಎಂದಿದ್ದ ಪ್ರಕಾಶ್ ರಾಜ್
ಇನ್ನೂ ಬೆಂಗಳೂರಿನ ಕಾಡುಗೋಡಿ ಮಗು ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕಾಡುಗೋಡಿ ಕೇಸ್ ಬಗ್ಗೆ ನಮ್ಮ ಸಿಬ್ಬಂದಿ ಜೊತೆ ಚರ್ಚೆ ಮಾಡಿದ್ದೇನೆ. ಲೋಪಗಳು ಅಧಿಕಾರಿಗಳಿಂದ ಆಗಿದೆ. ಎಪ್ರಿಲ್ 4 ರಂದು ಮರಣೋತ್ತರ ಪರೀಕ್ಷಾ ವರದಿ ಬಂದ ಕೂಡಲೇ ಅನುಮಾನ ಸಾವು ಅಂತ ತನಿಖೆ ಮಾಡಬೇಕಾಗಿತ್ತು. ಆದ್ರೆ UDR ಮಾಡಿಕೊಂಡು ಎಸ್‌ಐ ಹಂತದಲ್ಲಿ ಇಟ್ಟುಕೊಂಡಿದ್ದರು. ಅದು ತಪ್ಪು ಕಾನೂನು ವಿರುದ್ದ ಇದೆ. ಹೀಗಾಗಿ ಇನ್ಸ್ ಪೆಕ್ಟರ್, ಎಸ್‌ಐ, ರೈಟರ್ ಅನ್ನು ಇಂದು ಬೆಳಗ್ಗೆ ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಲೋಪ ಆಗಿದೆ. ಹೀಗಾಗಿ ಅಮಾನತು ಮಾಡಿದ್ದೇವೆ. ಎ1, ಎ2 ಅವರನ್ನು ಬಂಧನ ಮಾಡಲಾಗಿದೆ. ಮುಂದೆ ತನಿಖೆ ಮಾಡಿದ ಬಳಿಕ ಮಾಹಿತಿ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಬಿಟ್ ಕಾಯಿನ್ ಹಗರಣ ಕೇಸ್‌ಗೆ ಸಂಬಂಧಿಸಿದಂತೆ ಮಾತನಾಡಿ, ಅದು ಜಾರಿ ನಿರ್ದೇಶನಾಲಯದ ವ್ಯಾಪ್ತಿಯಲ್ಲಿದೆ. ಅವರು ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದು ನಮ್ಮ ವ್ಯಾಪ್ತಿಗೆ ಬರಲ್ಲ. ನಾವು ಈಗಾಗಲೇ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿದ್ದೇವೆ. ಡಿಕೆಶಿ ಅವರೇ ಅಧ್ಯಕ್ಷ ಇದ್ದರು. ಸಮಿತಿ ಪುನರ್ ರಚನೆ ಮಾಡಬೇಕಾ? ಕ್ರಮ ತೆಗೆದುಕೊಳ್ಳಬೇಕಾ? ಅನ್ನೋದ್ರ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ – ಅರ್ಜಿ ಸಲ್ಲಿಸಲು ಸೂಚನೆ
