CinemaKarnatakaLatestMain PostSandalwood

ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಬಿಗ್ ಬಾಸ್ ನಂತರ ಸಿಲೆಬ್ರಿಟಿಯಾದ ಸಾಮಾನ್ಯ ಹುಡುಗಿ ನಿವೇದಿತಾ ಗೌಡ, ರಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ಇನ್ನೂ ಹೆಚ್ಚು ಸುದ್ದಿ ಮಾಡಿದ್ದರು. ಆನಂತರ ಅವರು ನಟನೆ, ಶೋಗಳಿಗಿಂತಲೂ ಅವರು ಹಾಕುತ್ತಿರುವ ವಿಡಿಯೋ, ಫೋಟೋಗಳಿಂದಾಗಿಯೇ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

ಇನ್ಸ್ಟ್, ರೀಲ್ಸ್ ಗಳಲ್ಲಿ ನಿತ್ಯವೂ ಅವರು ಒಂದಿಲ್ಲೊಂದು ವಿಡಿಯೋ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಪತಿ ಚಂದನ್ ಶೆಟ್ಟಿ ಅವರನ್ನು ಕಿಚಾಯಿಸುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ನಿವೇದಿತಾ, ಇದೀಗ ಹೊಸ ಜವಾಬ್ದಾರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಮಿಸೆಸ್ ಇಂಡಿಯಾ ಆಗುವ ಕನಸು ಕಾಣುತ್ತಿದ್ದಾರಂತೆ.

ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಾಣುತ್ತಿದ್ದಾರಂತೆ ನಿವೇದಿತಾ ಗೌಡ. ಅದಕ್ಕಾಗಿ ಅವರು ತರಬೇತಿಯನ್ನು ಪಡೆಯುತ್ತಿದ್ದಾರಂತೆ. ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿದ್ದು, ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಅವರು ಟ್ರೈನಿಂಗ್ ಪಡೆಯುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ನಿವೇದಿತಾ ಭಾಗಿಯಾಗಲಿದ್ದಾರಂತೆ.

Leave a Reply

Your email address will not be published.

Back to top button