ಲಕ್ನೋ: ಉತ್ತರ ಪ್ರದೇಶದ ಫಝೀಲಾ ನಗರ್ (Fazilnagar) ಇನ್ಮುಂದೆ ಮಹಾವೀರ್ ನಗರ್ ಆಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಘೋಷಿಸಿದ್ದಾರೆ.
ಭಗವಾನ್ ಮಹಾವೀರನ ಗೌರವಾರ್ಥವಾಗಿ ಕುಶಿನಗರ ಜಿಲ್ಲೆಯ ಫಝೀಲಾ ನಗರವನ್ನು ‘ಪಾವಘರ್’ (Pavagarh) ಎಂದು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾಪವನ್ನು ಸಿಎಂ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಶಿವಸೇನೆ ಆಯ್ತು, ಈಗ ಟಿಎಂಸಿ ಸರದಿ – ದೀದಿ ಹೊರಗಿಟ್ಟು ಅಸಲಿ ಟಿಎಂಸಿ ರಚನೆಗೆ 50ಕ್ಕೂ ಹೆಚ್ಚು ಶಾಸಕರ ನಿರ್ಧಾರ
ಮರುನಾಮಕರಣಕ್ಕೆ ನಾವು ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಇದನ್ನು ಇನ್ಮುಂದೆ ಫಝೀಲಾ ನಗರ್ ಅಂತ ಕರೆಯಲಾಗುವುದಿಲ್ಲ, ಬದಲಿಗೆ ಪಾವಗಢ ಎಂದು ಕರೆಯಲಾಗುವುದು. ಇದನ್ನು ಭಗವಾನ್ ಮಹಾವೀರರ ಹೆಸರಿನಲ್ಲಿ ಗುರುತಿಸಲಾಗುವುದು ಎಂದು ಕುಶಿನಗರದಲ್ಲಿ 424 ಕೋಟಿ ರೂ.ಗೂ ಹೆಚ್ಚು ಮೌಲ್ಯದ 278 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ.
ಫಝೀಲಾ ನಗರ್ ವಿಧಾನಸಭಾ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿ ಶಾಸಕ ಸುರೇಂದ್ರ ಕುಶ್ವಾಹ ಪ್ರತಿನಿಧಿಸುತ್ತಿದ್ದಾರೆ. ಅದಕ್ಕೂ ಮೊದಲು 2012 ರಲ್ಲಿ ಮತ್ತು 2017 ರಲ್ಲಿ ಬಿಜೆಪಿ ಶಾಸಕಿ ಗಂಗಾ ಕುಶ್ವಾಹ ಗೆದ್ದಿದ್ದರು. ಇದನ್ನೂ ಓದಿ: ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ – ನಿತಿನ್ ನಬಿನ್‌ಗೆ ರಾಜೀನಾಮೆ ಸಲ್ಲಿಕೆ
ಹಿಂದಿನ ಸರ್ಕಾರಗಳನ್ನು ಟೀಕಿಸಿದ ಆದಿತ್ಯನಾಥ್, 2022 ಕ್ಕಿಂತ ಮೊದಲು ತಮ್ಕುಹಿರಾಜ್ ಮತ್ತು ಫಝೀಲಾ ನಗರಗಳಂತಹ ಪ್ರದೇಶಗಳು ಅಭಿವೃದ್ಧಿಯತ್ತ ಗಮನ ಸೆಳೆಯುವ ಬದಲು ಅಪಹಾಸ್ಯಕ್ಕೆ ಗುರಿಯಾಗಿದ್ದವು ಎಂದಿದ್ದಾರೆ. ಸ್ಥಳೀಯ ಪ್ರತಿನಿಧಿಗಳನ್ನು ಶ್ಲಾಘಿಸಿದ ಸಿಎಂ ಯೋಗಿ, ಪ್ರದೇಶದ ಶಾಸಕರು ಮತ್ತು ಸಂಸತ್ ಸದಸ್ಯರ ಸಂಘಟಿತ ಪ್ರಯತ್ನಗಳ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
