ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಾಹನವೇ ಕೆಟ್ಟು ಹೋಗಿದೆ. ಕೆಟ್ಟು ಹೋದ ವಾಹನ ರಿಪೇರಿ ಮಾಡಬೇಕು. ಸಿಎಂ ಎಂಬ ಡ್ರೈವರ್ ಚೇಂಜ್ ಮಾಡಿದ್ರೆ ಏನೂ ಆಗಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ವಿಚಾರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ 2028ಕ್ಕೆ ಬಿಜೆಪಿ ವಾಹನ ಹಿಡಿಯುತ್ತಾರೆ. ಸತ್ತ ಹೆಣಗಳಂತೆ ದಲಿತರು ಬದುಕಬಾರದು. ದಲಿತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉಳಿಗಾಲ ಇಲ್ಲ. ಹಾಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಂಡೆವು ಎಂದರು. ಇದನ್ನೂ ಓದಿ: 12 ಬಿಲಿಯನ್ ಡಾಲರ್ ಚಿನ್ನ ಮಾರಾಟಕ್ಕೆ ಆರ್‌ಬಿಐ ಪ್ಲ್ಯಾನ್
ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿಗಾಗಿ ದಲಿತರು ಹೋರಾಟ ನಡೆಸುವಂತಾಗಿದೆ. ನಾಚಿಕೆ ಇದ್ರೆ ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಕಾಂಗ್ರೆಸ್ ಬಿಟ್ಟು ಬನ್ನಿ. ದಲಿತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ನ್ಯಾಯ ಸಿಗಲ್ಲ. ಮಲ್ಲಿಕಾರ್ಜುನ ಖರ್ಗೆ ದಲಿತ ಸಿಎಂ ಮಾಡುವ ಬಗ್ಗೆ ತುಟಿ ಬಿಚ್ಚಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯುಪಿ ಫಝೀಲಾ ನಗರ್ ಇನ್ಮುಂದೆ ಮಹಾವೀರ್ ನಗರ್: ಸಿಎಂ ಯೋಗಿ ಘೋಷಣೆ
