– ಪೀಕ್ ಅವರ್‌ನಲ್ಲಿ 7 ನಿಮಿಷಕ್ಕೊಂದು ರೈಲಿನ ಸಂಚಾರ
ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ಕೊಟ್ಟಿದ್ದು, ಬುಧವಾರದಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ 2 ರೈಲು ಸೇರ್ಪಡೆಗೊಳ್ಳಲಿದೆ.
ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಓಡಾಡಲಿದೆ. ಇಲ್ಲಿ ತನಕ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರ ಇತ್ತು. ಸಾಮಾನ್ಯ ಸಮಯದಲ್ಲಿ ಪ್ರತಿ ರೈಲಿನ ನಡುವಿನ ಓಡಾಟದ ಅವಧಿ 14 ನಿಮಿಷದಿಂದ 10 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನ ವಾಹನವೇ ಕೆಟ್ಟು ಹೋಗಿದೆ, ಸಿಎಂ ಎಂಬ ಡ್ರೈವರ್ ಚೇಂಜ್ ಮಾಡಿದ್ರೆ ಏನೂ ಆಗಲ್ಲ: ಛಲವಾದಿ ನಾರಾಯಣಸ್ವಾಮಿ
ದಿ.2026ರ ಜೂನ್ 3ರಿಂದ, ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸೇರ್ಪಡೆ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.
Induction of Additional Trains on the Yellow Line from 3rd June 2026. pic.twitter.com/YudCrcwF6q
— ನಮ್ಮ ಮೆಟ್ರೋ (@OfficialBMRCL) June 2, 2026
ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ಸೇವಾ ಆವರ್ತನೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ನಿರೀಕ್ಷಾ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಇದನ್ನೂ ಓದಿ: 12 ಬಿಲಿಯನ್ ಡಾಲರ್ ಚಿನ್ನ ಮಾರಾಟಕ್ಕೆ ಆರ್‌ಬಿಐ ಪ್ಲ್ಯಾನ್
