BagalkotDistrictsKarnatakaLatestMain Post

ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ತೋರಿದ ನಿರಾಣಿ

ಬಾಗಲಕೋಟೆ: ಸಿದ್ದರಾಮಯ್ಯ ಅವರು ಪಕ್ಷದ ಹಿರಿಯರು. ಅವರ ವಿರುದ್ಧ ಬಿ.ಬಿ.ಚಿಮ್ಮನಕಟ್ಟಿ ಹೀಗೆ ಬಹಿರಂಗವಾಗಿ ಮಾತನಾಡಬಾರದಿತ್ತು ಎಂದು ಸಿದ್ದರಾಮಯ್ಯ ಮೇಲೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೃದು ಧೋರಣೆ ತೋರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ.ಚಿಮ್ಮನಕಟ್ಟಿ ಅವರು ಪಕ್ಷದ ಚೌಕಟ್ಟಿನಲ್ಲೆ ಮಾತನಾಡಬೇಕಿತ್ತು. ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿ ಆದವರು, ವಿಪಕ್ಷ ನಾಯಕರು. ಅವರ ವಯಸ್ಸಿಗಾದರೂ ಬೆಲೆ ಕೊಡಬೇಕಿತ್ತು. ಬಾದಾಮಿಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಹೊರಗಡೆ ಹೇಳಬಾರದಿತ್ತು ಎಂದರು.

ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಸಮಕಾಲೀನರು. ವಯಸ್ಸಿನಲ್ಲಿ ಅವರಷ್ಟೇ ಪ್ರಬಲ ಆಗಿರುವವರಾಗಿದ್ದಾರೆ. ಆದರೆ ಅವರು ಸಿದ್ದರಾಮಯ್ಯ ವಿರುದ್ಧ ಹೊರಗಡೆ ಹೀಗೆ ಮಾತನಾಡಬಾರದಿತ್ತು. ಇದು ಅವರ ಪಕ್ಷದ ವಿಚಾರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

ಯಾವುದೇ ರಾಜಕೀಯ ಪಕ್ಷ ಇರಲಿ ಸ್ವಪಕ್ಷದ ವ್ಯಕ್ತಿಯ ಮೇಲೆ ಅಸಮಾಧಾನವಿದ್ದರೆ ಕೂತು ಬಗೆ ಹರಿಸಿಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್, ಇತರೆ ಯಾವುದೇ ಪಕ್ಷ ಇದ್ದರೂ ಆಂತರಿಕ ಸಮಸ್ಯೆಯನ್ನು ಬಹಿರಂಗವಾಗಿ ಹೇಳಬಾರದು. ಇಂಥ ಘಟನೆ ಬಂದಾಗ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ

Leave a Reply

Your email address will not be published.

Back to top button