ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ನಿಖಿಲ್ ಕುಮಾರಸ್ವಾಮಿ, ಬಹಳ ದಿನಗಳ ನಂತರ ತಮ್ಮ ಅಪ್ಪನೊಂದಿಗಿನ ಆತ್ಮೀಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಿಶ್ಚತಾರ್ಥ ಆದಾಗಿನಿಂದ ಭಾವಿ ಪತ್ನಿ ರೇವತಿ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿದ್ದ ನಿಖಿಲ್, ಇದ್ದಕ್ಕಿದ್ದಂತೆ ತಂದೆಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್ ಹಾಗೂ ಲೈಕ್ ಮಾಡುತ್ತಿದ್ದಾರೆ.
Advertisement
Advertisement
ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ಮದುವೆ ಸಂಭ್ರಮದಲ್ಲಿದ್ದಾರೆ. ನಿಶ್ಚಿತಾರ್ಥವಾದ ನಂತರವಂತೂ ಅವರ ಹೊಸ ಸಿನಿಮಾಗಳ ಪೋಸ್ಟರ್ ಹಾಗೂ ಅಪ್ಡೇಟ್ಗಳಿಗಿಂತ ಹೆಚ್ಚಾಗಿ ಅವರ ಸಂಗಾತಿ ರೇವತಿ ಜೊತೆಗಿನ ಚಿತ್ರಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮಾಡರ್ನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಹೀಗೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Advertisement
Advertisement
ನಿಖಿಲ್ ಕುಮಾರಸ್ವಾಮಿ ಕೈಯಲ್ಲಿ ಸದ್ಯ 4 ಹೊಸ ಸಿನಿಮಾಗಳಿದ್ದು, ಟಾಲಿವುಡ್ ನಿರ್ದೇಶಕರೊಂದಿಗೆ ಮಾಡುತ್ತಿರುವ ಸಿನಿಮಾದ ಮುಹೂರ್ತ ಕೂಡ ಈಗಾಗಲೇ ಆಗಿದೆ. ಆದರೆ ಸಿನಿಮಾ ಕುರಿತು ಯಾವುದೇ ಅಪ್ಡೇಟ್ ಪೋಸ್ಟ್ ಮಾಡಿಲ್ಲ. ನಿಖಿಲ್ ಇನ್ಸ್ಟಾಗ್ರಾಂನಲ್ಲಿ ಇದೀಗ ಅವರ ಲವ್ ಲೈಫ್ಗೆ ಸಂಬಂಧಿಸಿದ ಅಪ್ಡೇಟ್ಗಳೇ ಹೆಚ್ಚು ಕಾಣುತ್ತಿವೆ. ಹೀಗಾಗಿ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಬೇಸರವಾಗಿದೆ.
ನಿಖಿಲ್ ತಮ್ಮ ಭಾವಿ ಪತ್ನಿ ರೇವತಿ ಅವರಿಗೆ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಪ್ರೇಮ ನಿವೇದನೆ ಮಾಡಿದ್ದು, ರೇವತಿ ಬರೆದಿರುವ ರೊಮ್ಯಾಂಟಿಕ್ ಸಾಲುಗಳನ್ನು ಓದುತ್ತಿರುವುದು. ಹೀಗೆ ದಿನಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಇದರ ನಡುವೆ ಇದೀಗ ಅಪ್ಪನೊಂದಿಗೆ ಆತ್ಮೀಯವಾಗಿರುವ ಫೋಟೋವೊಂದನ್ನು ನಿಖಿಲ್ ಹಂಚಿಕೊಂಡಿದ್ದಾರೆ.
ನಿಖಿಲ್ ಅಪ್ಪ-ಅಮ್ಮನೊಂದಿಗೆ ಇರುತ್ತಿದ್ದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಆಗಾಗ ಹಂಚಿಕೊಳ್ಳುತ್ತಿದ್ದರು. ಆದರೆ ಕೆಲ ಸಮಯದಿಂದ ಪೋಷಕರೊಂದಿಗೆ ಇರುವ ಯಾವ ಚಿತ್ರಗಳನ್ನೂ ಹಂಚಿಕೊಂಡಿರಲಿಲ್ಲ. ಎಂಗೇಜ್ಮೆಂಟ್ ನಂತರ ರೇವತಿ ಜೊತೆಗಿರುವ ಫೋಟೋ ಹಂಚಿಕೊಳ್ಳುತ್ತಿದ್ದರು. ಈಗ ಮತ್ತೆ ಅಪ್ಪನನ್ನು ಅಪ್ಪಿಕೊಂಡಿರುವ ಒಂದು ಫೋಟೋ ಹಂಚಿಕೊಂಡಿದ್ದು, ಇದು ನೆಟ್ಟಿಗರ ಮನಗೆದ್ದಿದೆ.
https://www.instagram.com/p/B8xVcAtpno-/