ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ (Sleeper Bus) ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ದೆಹಲಿ ಸರ್ಕಾರ ಬಸ್‌ಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ದೆಹಲಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಲ್ಲಿ ಪ್ಯಾನಿಕ್ ಬಟನ್ (Panic Button) ಮತ್ತು ವಾಹನ ಟ್ರ‍್ಯಾಕಿಂಗ್ ಸಾಧನಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಎಂದು ಸಾರಿಗೆ ಇಲಾಖೆ ಹೊಸ ನಿರ್ದೇಶನ ಹೊರಡಿಸಿದೆ.
ಬಸ್‌ಗಳ ಕಿಟಕಿಗಳಿಗೆ ಪರದೆ (Curtains) ಹಾಕುವುದನ್ನು ನಿಷೇಧಿಸಲಾಗಿದೆ. ಬಸ್‌ಗಳ ಒಳಗೆ ಹಾಗೂ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುವಂತೆ ನಿಯಮಾನುಸಾರ ಕಿಟಕಿ ಮತ್ತು ಗಾಜಿನ ಪಾರದರ್ಶಕತೆಯನ್ನು ಕಾಪಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಓವರ್‌ಟೇಕ್ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ರು; ದುನಿಯಾ ವಿಜಯ್ ಪುತ್ರನ ವಿರುದ್ಧ ಗಾಯಾಳು ಮನೀಷ್ ಆರೋಪ
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಚಾಲಕ ಮತ್ತು ಕಂಡಕ್ಟರ್ ಕೃತ್ಯ ಎಸಗಿದ್ದು, ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ. ಬಾಲಕಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಗಳಿಗೆ ಪರದೆಗಳನ್ನು ಹಾಕಲಾಗಿತ್ತು. ಇದರಿಂದ ಬಸ್‌ನೊಳಗಿನ ಚಟುವಟಿಕೆಗಳು ಹೊರಗಿನಿಂದ ಕಾಣದಂತಾಗಿದ್ದವು ಎನ್ನಲಾಗಿದೆ. ಅಲ್ಲದೆ, ಕಾನೂನಿನ ಪ್ರಕಾರ ಇರಬೇಕಾದ ಸಿಸಿಟಿವಿ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ – ‘ಸೇವಾ ಸಂಕಲ್ಪ’ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ
ಆಗಸ್ಟ್ 4ರ ರಾತ್ರಿ ಘಟನೆ ನಡೆದಿದ್ದು, ಕೃತ್ಯದ ಬಳಿಕ ಚಾಲಕ ಮತ್ತು ಕಂಡಕ್ಟರ್ ಬಾಲಕಿಯನ್ನು ಕಾಶ್ಮೀರಿ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಗ್ರೇಟರ್ ನೋಯ್ಡಾದಿಂದ ಬಸ್ ಹತ್ತಿದ್ದು, ಅಲ್ಲಿಂದ 40 ಕಿಲೋಮೀಟರ್‌ಗೂ ಹೆಚ್ಚು ದೂರದಲ್ಲಿರುವ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಂದ ಮಗ
ಪ್ಯಾನಿಕ್ ಬಟನ್, ಟ್ರ‍್ಯಾಕಿಂಗ್ ಸಾಧನ ಕಡ್ಡಾಯ:
ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಹೊಸ ನಿರ್ದೇಶನಗಳು ದೆಹಲಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಅನ್ವಯಿಸಲಿವೆ. ಇತರ ರಾಜ್ಯಗಳ ಬಸ್‌ಗಳಿಗೂ ಈ ನಿಯಮಗಳು ಅನ್ವಯವಾಗಲಿವೆ. ಪ್ರತಿ ಬಸ್‌ನಲ್ಲಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಪ್ಯಾನಿಕ್ ಬಟನ್‌ಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಪ್ರಯಾಣಿಕರಿಗೆ ಸುಲಭವಾಗಿ ತಲುಪುವ ರೀತಿಯಲ್ಲಿ ಪ್ಯಾನಿಕ್ ಬಟನ್ ಅಳವಡಿಸಿರಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಮದುವೆ ಮನೆ ಮೇಲಿನ ದಾಳಿಗೆ ನಾಲ್ವರು ಬಲಿ – ʻಮರೆಯಲಾಗದ ಪಾಠ ಕಲಿಸ್ತೀವಿʼ; ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಪ್ರತಿ ಬಸ್‌ನಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಾಧನ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಇರಬೇಕು. ರಾತ್ರಿ ವೇಳೆ ಅಥವಾ ಬಸ್ ಸಂಚಾರದಲ್ಲಿಲ್ಲದ ಸಮಯದಲ್ಲಿ ವಾಹನಗಳನ್ನು ಸುರಕ್ಷಿತ, ಅಧಿಕೃತ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲೇ ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ. ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ಕೂಡ ನಿಗದಿತ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾನದಂಡಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಕಲಿ ಔಷಧಿ ದಂಧೆ – ಕಿಂಗ್‌ಪಿನ್ ಪ್ರಶಾಂತ್ ಕಸ್ಟಡಿಗೆ ಪಡೆಯಲು SIT ಸಜ್ಜು
ಬಸ್‌ಗಳಲ್ಲಿ ಪರದೆಗೆ ಬ್ರೇಕ್:
ಬಸ್‌ಗಳ ಕಿಟಕಿಗಳಿಗೆ ಪರದೆ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಂಭಾಗದ ಗಾಜು, ಹಿಂಭಾಗದ ಗಾಜು ಹಾಗೂ ಬದಿಯ ಕಿಟಕಿಗಳ ಪಾರದರ್ಶಕತೆಗೆ ಸಂಬಂಧಿಸಿದ ನಿಗದಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ನಿರಂತರ ಕಾವೇರಿ ನೀರು; ಒಳಹರಿವು ಕುಸಿತ
ಕುಡಿದು ಚಾಲನೆ ಮಾಡಿದರೆ ಕ್ರಮ:
ಚಾಲಕರು ಮತ್ತು ಬಸ್ ಸಿಬ್ಬಂದಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮದ್ಯ ಅಥವಾ ಯಾವುದೇ ಮಾದಕ ವಸ್ತುವಿನ ಪ್ರಭಾವದಲ್ಲಿರುವಾಗ ವಾಹನ ಚಲಾಯಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚಾಲಕರು ಮಾನ್ಯ ಚಾಲನಾ ಪರವಾನಗಿ, ಸಮವಸ್ತ್ರ ಹಾಗೂ ಅನ್ವಯವಾಗುವಲ್ಲಿ ಪಿಎಸ್‌ವಿ ಬ್ಯಾಡ್ಜ್ ಹೊಂದಿರಬೇಕು. ಕಂಡಕ್ಟರ್‌ಗಳು ಕೂಡ ಮಾನ್ಯ ಪರವಾನಗಿ, ಸಮವಸ್ತ್ರ ಹಾಗೂ ಪಿಎಸ್‌ವಿ ಬ್ಯಾಡ್ಜ್ ಹೊಂದಿರಬೇಕು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ 31 ಬಾಂಗ್ಲಾ ಪ್ರಜೆಗಳ ಗಡಿಪಾರು
ಚಾಲಕರು, ಕಂಡಕ್ಟರ್‌ಗಳು, ಅಟೆಂಡರ್‌ಗಳು ಸೇರಿದಂತೆ ಬಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಅವರ ಹಿನ್ನೆಲೆ ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಬಸ್ ನಿರ್ವಾಹಕರಿಗೆ ಸೂಚಿಸಲಾಗಿದೆ. ಬಸ್ ಸಂಚರಿಸುತ್ತಿರುವಾಗ ಎಲ್ಲಾ ಬಾಗಿಲುಗಳು ಸುರಕ್ಷಿತವಾಗಿ ಮುಚ್ಚಿರಬೇಕು. ವಿಕಲಚೇತನ ಪ್ರಯಾಣಿಕರು ಬಸ್ ಹತ್ತುವಾಗ ಅಥವಾ ಇಳಿಯುವಾಗ ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಮಂಡ್ಯ | ಮೀಮ್ಸ್‌ನಲ್ಲಿ ಅತ್ಯಾಧುನಿಕ ಎದೆಹಾಲು ಶೇಖರಣಾ ಘಟಕ ಸ್ಥಾಪನೆ
ಮಹಿಳೆಯರಿಗೆ ಕಿರುಕುಳ ನೀಡಿದರೆ ತಕ್ಷಣ ಪೊಲೀಸರಿಗೆ ಮಾಹಿತಿ:
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ವಿಶೇಷ ಸೂಚನೆಗಳನ್ನು ನೀಡಿದೆ. ಮಹಿಳೆಯರ ಮೇಲೆ ಕಿರುಕುಳ ಅಥವಾ ಅಸಭ್ಯ ವರ್ತನೆ ತಡೆಯುವ ಕುರಿತು ಚಾಲಕರು, ಕಂಡಕ್ಟರ್‌ಗಳು ಹಾಗೂ ಇತರ ಸಿಬ್ಬಂದಿಗೆ ತರಬೇತಿ ಮತ್ತು ಜಾಗೃತಿ ಮೂಡಿಸಬೇಕು ಎಂದು ತಿಳಿಸಲಾಗಿದೆ. ಬಸ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ಅಪರಾಧ ನಡೆಯುತ್ತಿರುವುದು ಕಂಡುಬಂದರೆ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ಬಸ್ ಅನ್ನು ಸಮೀಪದ ಪೊಲೀಸ್ ಠಾಣೆ, ಪೊಲೀಸ್ ಪೋಸ್ಟ್ ಅಥವಾ ಪಿಸಿಆರ್ ವಾಹನದ ಬಳಿ ಕರೆದೊಯ್ಯಬೇಕು ಎಂದು ನಿರ್ದೇಶಿಸಲಾಗಿದೆ. ಇದನ್ನೂ ಓದಿ: ನನ್ನೊಂದಿಗೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ಯಾರು ತಯಾರಿದ್ದೀರಿ ಬನ್ನಿ: ರಾಯರೆಡ್ಡಿ ಸವಾಲ್
ಅನಧಿಕೃತ ಸ್ಥಳಗಳಲ್ಲಿ ಬಸ್ ನಿಲ್ಲಿಸುವಂತಿಲ್ಲ:
ಪ್ರತಿ ಬಸ್ ಮಾನ್ಯ ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿರಬೇಕು ಮತ್ತು ಯಾಂತ್ರಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕು. ವಾಹನಗಳು ನಿಗದಿತ ಮಾಲಿನ್ಯ ನಿಯಮಗಳನ್ನು ಪಾಲಿಸಬೇಕು ಹಾಗೂ ಮಾನ್ಯ ಪಿಯುಸಿ ಪ್ರಮಾಣಪತ್ರ ಹೊಂದಿರಬೇಕು. ಪ್ರಯಾಣಿಕರು ಬಸ್ ಹತ್ತುವುದು ಮತ್ತು ಇಳಿಯುವುದು ನಿಗದಿತ ಬಸ್ ನಿಲ್ದಾಣ ಅಥವಾ ಅಧಿಕೃತ ಸ್ಥಳಗಳಲ್ಲೇ ನಡೆಯಬೇಕು. ರಸ್ತೆ ಮಧ್ಯದಲ್ಲಿ, ಜಂಕ್ಷನ್‌ಗಳಲ್ಲಿ ಅಥವಾ ಅಪಾಯಕಾರಿ ಹಾಗೂ ಅನಧಿಕೃತ ಸ್ಥಳಗಳಲ್ಲಿ ಬಸ್ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಬಸ್‌ಗಳು ಸಂಚಾರ ನಿಯಮಗಳು ಹಾಗೂ ನಿಗದಿತ ಬಸ್ ಲೇನ್‌ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅಮೆರಿಕ ವಿರುದ್ಧ ಇರಾನ್ ಪ್ರತೀಕಾರ – ಜೋರ್ಡಾನ್, ಬಹ್ರೇನ್‌ನಲ್ಲಿರೋ ಯುಎಸ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:
ಹೊಸ ಸುರಕ್ಷತಾ ನಿಯಮಗಳ ಅನುಷ್ಠಾನವನ್ನು ಪರಿಶೀಲಿಸಲು ಸಾರಿಗೆ ಇಲಾಖೆ ತಪಾಸಣೆ ಮತ್ತು ಜಾರಿ ಕ್ರಮಗಳನ್ನು ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸಿದರೆ ದಂಡ, ವಾಹನ ವಶಕ್ಕೆ ಪಡೆಯುವುದು ಅಥವಾ ಸೀಜ್ ಮಾಡುವುದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಬಹುದು. ಅಗತ್ಯವಿದ್ದಲ್ಲಿ ವಾಹನಗಳ ಪರವಾನಗಿ ಅಥವಾ ಪರ್ಮಿಟ್‌ಗಳನ್ನು ಅಮಾನತುಗೊಳಿಸುವುದು ಅಥವಾ ರದ್ದುಪಡಿಸುವ ಕ್ರಮವನ್ನೂ ಕೈಗೊಳ್ಳಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: KR ಮಾರುಕಟ್ಟೆಗೆ ಬರುವ ವಾಹನ ಸವಾರರಿಗೆ ಸ್ಮಾರ್ಟ್ ಪಾರ್ಕಿಂಗ್ ಬರೆ; ಪ್ರತೀ ವಾಹನಕ್ಕೂ ಎಂಟ್ರಿ ಫೀಸ್ ಕಡ್ಡಾಯ
ಸುರಕ್ಷತಾ ಕ್ರಮಗಳು ಕೇವಲ ಕಾಗದದ ಮೇಲಿರದೆ ವಾಸ್ತವವಾಗಿ ಜಾರಿಯಾಗಬೇಕು. ಎಲ್ಲಾ ಅಗತ್ಯ ವ್ಯವಸ್ಥೆಗಳು ಮತ್ತು ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಬಸ್ ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೊಸ ನಿರ್ದೇಶನಗಳನ್ನು ಎಲ್ಲಾ ಚಾಲಕರು, ಕಂಡಕ್ಟರ್‌ಗಳು ಮತ್ತು ಬಸ್ ಸಿಬ್ಬಂದಿಗೆ ತಲುಪಿಸುವಂತೆ ಬಸ್ ನಿರ್ವಾಹಕರಿಗೆ ಸೂಚಿಸಲಾಗಿದ್ದು, ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸರ್ಕಾರ ಒತ್ತು ನೀಡಿದೆ. ಇದನ್ನೂ ಓದಿ: ದರ್ಶನ್‌ಗೆ ಮತ್ತೆ ಢವ ಢವ – ಇಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?
