ಬೆಂಗಳೂರು: ನಕಲಿ ಔಷದಿ (Fake Medicine) ದಂಧೆಯ ಕಿಂಗ್ ಪಿನ್ ಪ್ರಶಾಂತ್‌ನನ್ನು ತನ್ನ ಕಸ್ಟಡಿಗೆ ಪಡೆಯಲು ವಿಶೇಷ ತನಿಖಾ ತಂಡ (SIT) ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ (Blue Corner Notice) ಹೊರಡಿಸಿದೆ.
ಬ್ಲೂ ಕಾರ್ನರ್ ನೋಟಿಸ್‌ಗೆ ಇಂಟರ್ ಪೋಲ್ ಮುಖಾಂತರ ಎಸ್‌ಐಟಿಗೆ ರಿಪ್ಲೈ ಬಂದಿದ್ದು ಆರೋಪಿ ಪ್ರಶಾಂತ್ ಅಜರ್ ಬೈಜಾನ್‌ನಲ್ಲಿರುವ ಮಾಹಿತಿಯನ್ನ ಎಸ್‌ಐಟಿ ಅಧಿಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ. ಆರೋಪಿ ಪ್ರಶಾಂತ್ ನನ್ನ ಅಜರ್ ಬೈಜಾನ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮಾಡಿ ಬಿಡುಗಡೆಗೊಳಿಸಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ನಿರಂತರ ಕಾವೇರಿ ನೀರು; ಒಳಹರಿವು ಕುಸಿತ
ಆರೋಪಿ ಪ್ರಶಾಂತ್‌ನನ್ನ ಅಜರ್ ಬೈಜಾನ್‌ನಿಂದ ಕರೆತರಲು ತಲೆಕೆಡಿಸಿಕೊಂಡಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಆರೋಪಿ ಪ್ರಶಾಂತ್‌ಗೆ ಇಂಡಿಯಾಗೆ ಬರುವ ಅನಿವಾರ್ಯತೆ ಎದುರಾಗಿದೆ. ಸೆಪ್ಟೆಂಬರ್ 9ಕ್ಕೆ ಆರೋಪಿ ಪ್ರಶಾಂತ್ ವೀಸಾ ಅವದಿ ಮುಕ್ತಾಯವಾಗುತ್ತದೆ. ಹಾಗಾಗಿ ಆರೋಪಿ ಭಾರತಕ್ಕೆ ಬರುತ್ತಿದ್ದಂತೆ ಬಂಧಿಸಲು ಎಸ್‌ಐಟಿ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ 31 ಬಾಂಗ್ಲಾ ಪ್ರಜೆಗಳ ಗಡಿಪಾರು
ಈಗಾಗಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಆರೋಪಿ ಪ್ರಶಾಂತ್ ಬಗ್ಗೆ ಮಾಹಿತಿ ಹಂಚಿಕೆ ಮಾಡಿದ್ದು, ಭಾರತಕ್ಕೆ ಬರುತ್ತಿದ್ದಂತೆ ಆರೋಪಿಯನ್ನ ಲಾಕ್ ಮಾಡಿಕೊಳ್ಳಲು ಕಾನೂನು ಪ್ರಕ್ರಿಯೆಯನ್ನ ಎಸ್‌ಐಟಿ ಮಾಡಿಕೊಳ್ಳುತ್ತಿದೆ ಎಂದು ಬಲ್ಲ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಮಂಡ್ಯ | ಮೀಮ್ಸ್‌ನಲ್ಲಿ ಅತ್ಯಾಧುನಿಕ ಎದೆಹಾಲು ಶೇಖರಣಾ ಘಟಕ ಸ್ಥಾಪನೆ
ಬ್ಲೂ ಕಾರ್ನರ್ ನೋಟಿಸ್ ಎಂದರೇನು?
ಬ್ಲೂ ಕಾರ್ನರ್ ನೋಟಿಸ್ ಎಂದರೆ, ಅಪರಾಧ ಪ್ರಕರಣದಲ್ಲಿ ಬೇಕಾಗಿರುವ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಿಗೆ ನೀಡುವ ಅಂತರರಾಷ್ಟ್ರೀಯ ಸೂಚನೆ. ಇದು ಆರೋಪಿ ಯಾವ ದೇಶದಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಮತ್ತು ಆತನ ಕುರಿತು ಮಾಹಿತಿಯನ್ನು ಸಂಬಂಧಿತ ದೇಶಗಳಿಂದ ಪಡೆಯಲು ಬಳಸಲಾಗುತ್ತದೆ. ಇದನ್ನೂ ಓದಿ: ನನ್ನೊಂದಿಗೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ಯಾರು ತಯಾರಿದ್ದೀರಿ ಬನ್ನಿ: ರಾಯರೆಡ್ಡಿ ಸವಾಲ್
