ಬೆಂಗಳೂರು: ನಗರದ ಹೋಟೆಲ್‌ಗಳ ಮೇಲೆ ಆಹಾರ ಮತ್ತು ಔಷಧ ಆಡಳಿತ (FDA) ದಾಳಿ ಬೆನ್ನಲ್ಲೇ ಹೋಟೆಲ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ 100 ಹೋಟೆಲ್‌ಗಳ ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿಗೆ ಶುಚಿತ್ವ, ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಟ್ರೈನಿಂಗ್ ನೀಡಲು ಮುಂದಾಗಿದೆ.
ಸೆಪ್ಟೆಂಬರ್ 7 ಮತ್ತು 8ರಂದು ಟ್ರೈನಿಂಗ್ ಸೆಷನ್ ಆಯೋಜಿಸಲಾಗಿದೆ. ಈಗಾಗಲೇ ಬೆಂಗಳೂರಿನ 100 ಹೋಟೆಲ್‌ಗಳಿಂದ ಟ್ರೈನಿಂಗ್‌ಗಾಗಿ ರಿಜಿಸ್ಟ್ರೇಷನ್ ಮಾಡಲಾಗಿದೆ. ಹೋಟೆಲ್ ಮ್ಯಾನೇಜರ್‌ಗಳು, ಸಿಬ್ಬಂದಿ ಹಾಗೂ ಕಿಚನ್ ಡಿಪಾರ್ಟ್‌ಮೆಂಟ್ ಸಿಬ್ಬಂದಿ ಈ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ.
ಕಳೆದ ವಾರ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಹೋಟೆಲ್ ಅಸೋಸಿಯೇಷನ್ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ಹೋಟೆಲ್‌ಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕೂ ಮುನ್ನ ಆಹಾರ ಸುರಕ್ಷತಾ ಅಧಿಕಾರಿಗಳು ಬೆಂಗಳೂರಿನ ಹಲವು ಹೋಟೆಲ್‌ಗಳಿಗೆ ದಾಳಿ ನಡೆಸಿ, 60ಕ್ಕೂ ಹೆಚ್ಚು ಹೋಟೆಲ್‌ಗಳಿಗೆ ನೋಟಿಸ್ ನೀಡಿದ್ದರು. ಇದನ್ನೂ ಓದಿ : ಜಾಗಿಂಗ್ ಮಾಡ್ತಿದ್ದ ಮಹಿಳೆಯರ ವಿಡಿಯೋ ಮಾಡಿ ತಗ್ಲಾಕೊಂಡ ಕಾಮುಕ ಯುವಕ; ಸ್ಥಳೀಯರಿಂದ ತರಾಟೆ
ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಹೋಟೆಲ್ ಅಸೋಸಿಯೇಷನ್, ಹೋಟೆಲ್ ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿಗೆ ವಿಶೇಷ ಟ್ರೈನಿಂಗ್ ಸೆಷನ್ ನಡೆಸಲು ನಿರ್ಧರಿಸಿದೆ.ಇದನ್ನೂ ಓದಿ : ಬಾಲಾಕೋಟ್ ದಾಳಿ ಹೀರೋ ಅಭಿನಂದನ್ ವರ್ಧಮಾನ್ ಈಗ FLY91 ಪೈಲಟ್

