ಬೆಂಗಳೂರು: ಸಂಜೆ ಸುರಿದ ಮಳೆಗೆ ಮಂಜುನಾಥ್ ನಗರದ ಮೋದಿ ಆಸ್ಪತ್ರೆ ಬಳಿ (Rain Effect) ಬೃಹತ್ ಮರ ನೆಲಕ್ಕುರುಳಿದ ಪರಿಣಾಮ ಐದಾರು ಅಂಗಡಿಗಳು ಜಖಂ ಆಗಿವೆ.
ಬಹಳ ದಿನಗಳ ನಂತರ ಸುರಿದ ಮಳೆಗೆ ಆಸ್ಪತ್ರೆಯ ಬಳಿ ಇದ್ದ ಬೃಹತ್ ಮರ ಏಕಾಏಕಿ ನೆಲಕ್ಕುರುಳಿದೆ. ಪರಿಣಾಮ ಮರದ ಕೆಳಗಿದ್ದ ಅಂಗಡಿಗಳು ಜಖಂ ಆಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸದ್ಯ ಮರವನ್ನು ರಸ್ತೆ ಬದಿಗೆ ಸರಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ತಡರಾತ್ರಿ ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು

