ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಿರ್ದೇಶಕ ನಂದ ಕಿಶೋರ್ ಮತ್ತೆ ಸುದ್ದಿಯಲ್ಲಿದ್ದಾರೆ. ಪೊಗರು ಚಿತ್ರದ ಸಕ್ಸಸ್ ನಂತರ ರಾಣಾ ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದ್ದಂತೆ ಮಾಲಿವುಡ್‌ನ ಸೂಪರ್ ಸ್ಟಾರ್‌ಗೆ ನಿರ್ದೇಶಿಸಲು ರೆಡಿಯಾಗಿದ್ದಾರೆ.
ನಟನಾಗಿ, ನಿರ್ದೇಶಕನಾಗಿ, ಛಾಪು ಮೂಡಿಸುತ್ತಿರುವ ನಂದ ಕಿಶೋರ್ ಈಗ ಚಿತ್ರರಂಗದಲ್ಲಿ ಮತ್ತಷ್ಟು ಆಕ್ಟೀವ್ ಆಗಿದ್ದಾರೆ. ರಾಣಾ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದಂತೆ, ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ
Advertisement
Advertisement
ಮೋಹನ್ ಲಾಲ್ ಅವರಿಗಾಗಿಯೇ ಪವರ್ ಫುಲ್ ಕಥೆಯೊಂದನ್ನ ತಯಾರಿಸಿದ್ದಾರೆ ನಿರ್ದೇಶಕ ನಂದ ಕಿಶೋರ್. ಇನ್ನೂ ಚಿತ್ರದ ಕಂಟೆಂಟ್ ಕೇಳಿ ಥ್ರಿಲ್ ಆಗಿ ಈ ಸಿನಿಮಾಗೆ ನಟ ಮೋಹನ್ ಲಾಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ.
Advertisement
Advertisement
‘ವೃಷಭ’ ಅನ್ನೋ ಪವರ್ ಫುಲ್ ಟೈಟಲ್ ಮೂಲಕ ಮೋಹನ್ ಲಾಲ್ ಮತ್ತು ನಂದ ಕಿಶೋರ್ ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ‘ಪೃಥ್ವಿ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿರುವ ಮೋಹನ್ ಲಾಲ್ ಅವರ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇನ್ನು ಈ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ. ಇದನ್ನೂ ಓದಿ: ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ