BollywoodCinemaLatestMain Post

ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ `ಬ್ರಹ್ಮಾಸ್ತ್ರʼ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. `ಲಾಲ್ ಸಿಂಗ್ ಚಡ್ಡಾ’ ಚಿತ್ರದ ನಂತರ ಮತ್ತೆ ಬಾಯ್‌ಕಾಟ್‌ಗೆ `ಬ್ರಹ್ಮಾಸ್ತ್ರʼ ಚಿತ್ರ ಗುರಿಯಾಗುತ್ತಿದೆ. ಈ ಚಿತ್ರದ ರಿಲೀಸ್‌ಗೆ ವಿರೋಧ ವ್ಯಕ್ತವಾಗುತ್ತಿದೆ.

ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರʼ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಸೆಪ್ಟೆಂಬರ್ 9ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಓಪನ್ ಆಗುತ್ತಿದಂತೆ 10000 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿದೆ. ಈ ಬೆನ್ನಲ್ಲೇ ಈ ಚಿತ್ರಕ್ಕೆ ವಿರೋಧವಾಗಿ, ಟ್ವಿಟ್ಟರ್‌ನಲ್ಲಿ ಬಾಯ್‌ಕಾಟ್ `ಬ್ರಹ್ಮಾಸ್ತ್ರʼ ಟ್ರೆಂಡ್ ಆಗುತ್ತಿದೆ. ಇದನ್ನೂ ಓದಿ:ರಾಜಕೀಯಕ್ಕೆ ಸೇರಿ ಅಂದವರಿಗೆ ಕಾಫಿನಾಡು ಚಂದು ಹೇಳಿದ್ದೇನು ಗೊತ್ತಾ?

 

View this post on Instagram

 

A post shared by Alia Bhatt 🤍☀️ (@aliaabhatt)

410 ಕೋಟಿ ವೆಚ್ಚದಲ್ಲಿ `ಬ್ರಹ್ಮಾಸ್ತ್ರʼ ಚಿತ್ರ ನಿರ್ಮಾಣವಾಗಿದೆ. ಇದೀಗ ಈ ಚಿತ್ರಕ್ಕೆ ಬಾಯ್‌ಕಾಟ್ ಅನ್ನೋ ಕಂಟಕ ಎದುರಾಗಿದೆ. ಚಿತ್ರದ ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಬಾಯ್‌ಕಾಟ್ ಕಂಟಕದ ಮಧ್ಯೆ ಸಿನಿಮಾ ಗೆಲ್ಲುತ್ತಾ ಎಂಬುದನ್ನ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button