ಚಿಕ್ಕೋಡಿ: ಜೋಡಿ ಕೊಲೆ ಪ್ರಕರಣದ ಸಾಕ್ಷಿ ಹೇಳಲು ಕೋರ್ಟ್‌ಗೆ (Court) ಹೊಗಬೇಕಿದ್ದ ವ್ಯಕ್ತಿಯ ಶವ ಅಥಣಿಯ (Athani) ಹಣಮಾಪುರ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಮಹಾರಾಷ್ಟ್ರ (Maharashtra) ಮೂಲದ ದಾದಾಸೋ ಇಮಗರ (56) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬಾವಿ ವಿಚಾರಕ್ಕೆ ಮಗ ಹಾಗೂ ತಮ್ಮನನ್ನು ಸಂಬಂಧಿಕರು ಕೊಲೆ ಮಾಡಿದ್ದರು. ಇದನ್ನು ದಾದಾಸೋ ಕಣ್ಣಾರೆ ಕಂಡಿದ್ದ. ಈ ಬಗ್ಗೆ ಹತ್ತು ಜನರ ವಿರುದ್ಧ ದೂರು ದಾಖಲಿಸಿದ್ದ. ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಿತ್ತು. ಏಳು ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ – 15ರ ಬಾಲಕ ಆತ್ಮಹತ್ಯೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ಲಿ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ದಾದಾಸೋ ಹೋರಟಿದ್ದ. ಈ ವೇಳೆ ಅಪರಿಚಿತರು ಆತನನ್ನು ಅಪಹರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಜತ್ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿತ್ತು.
ಸ್ಥಳಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು, ಸಾಂಗ್ಲಿ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಹಣ ದೋಚಿದ ಸೈಬರ್ ವಂಚಕರು!

