– ಬೆಂಗ್ಳೂರಲ್ಲಿ 1 ಕೋಟಿ ಜನ ಇದ್ರೆ 1.5 ಕೋಟಿ ವಾಹನಗಳಿವೆ!
ಬೆಂಗಳೂರು: ನಗರದಲ್ಲಿ (Bengaluru) ಹೆಚ್ಚು ಟ್ರಾಫಿಕ್ (Traffic) ಜಾಮ್ ಆಗ್ತಾ ಇರೋದು ವಾಹನಗಳ ಬ್ರೇಕ್ ಡೌನ್‌ನಿಂದ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಇಂದು (ಜು.4) ಬೆಳಗ್ಗೆ ಕೆಆರ್. ಸರ್ಕಲ್‌ನಲ್ಲಿ ಆದ ಅಪಘಾತದ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಅಪಘಾತದ ಬಗ್ಗೆ ಮಾಹಿತಿ ಇಲ್ಲ. ಮೊನ್ನೆ ಬೆಂಗಳೂರು ಟ್ರಾಫಿಕ್ ಬಗ್ಗೆ ರಿವ್ಯೂ ಮಾಡಿದಾಗ 66% ಟ್ರಾಫಿಕ್ ಜಾಮ್ ಆಗ್ತಾ ಇರೋದು ವಾಹನಗಳ ಬ್ರೇಕ್ ಡೌನ್‌ನಿಂದ. ಅದರಲ್ಲಿ ಹೆಚ್ಚಾಗಿ ಬಸ್‌ಗಳಲ್ಲಿ ಆಗ್ತಿದೆ. ಇದಕ್ಕಾಗಿ Urban Mobility ಪ್ಲಾನ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕೆಆರ್ ಸರ್ಕಲ್‌ನಲ್ಲಿ ಬಿಎಂಟಿಸಿ ಬಸ್ ನಡುವೆ ಸರಣಿ ಅಪಘಾತ – ಚಾಲಕ ಗಂಭೀರ, 13 ಮಂದಿಗೆ ಗಾಯ

ಪ್ರತಿ ವರ್ಷ10.7% ವಾಹನಗಳ ಏರಿಕೆ
ಸಮಸ್ಯೆ ಪರಿಹಾರ ಅಗಬೇಕಾದ್ರೆ ಸಂಬಂಧಪಟ್ಟವರು ಟ್ರಾಫಿಕ್ ಪೊಲೀಸ್, ಜಿಬಿಎ, ಕಾರ್ಪೊರೇಟ್ಸ್, ಶಿಕ್ಷಣ ಸಂಸ್ಥೆಗಳು ಸೇರಿ ಒಂದು Urban Mobility ಮಿಷನ್ ಮಾಡಬೇಕು ಅಂತ ಆಲೋಚನೆ ಇದೆ. ವಾರ,10 ದಿನಗಳಲ್ಲಿ ಸಮಿತಿ ರಚನೆ ಮಾಡ್ತೀವಿ. ಇರೋ ವ್ಯವಸ್ಥೆ ಸಿಸ್ಟಮ್ ಹೇಗೆ ಸರಿ ಮಾಡಬಹುದು ಅಂತ ನೋಡ್ತೀವಿ. ಬೆಂಗಳೂರಿನಲ್ಲಿ ಒಂದು ಕೋಟಿ ಜನಸಂಖ್ಯೆ ಇದ್ದರೆ ಒಂದೂವರೆ ಕೋಟಿ ವಾಹನಗಳು ಇವೆ. ಜನಸಂಖ್ಯೆಗಿಂತ ಜಾಸ್ತಿ ಇದೆ. ಜನಸಂಖ್ಯೆ 3% ಹೆಚ್ಚಳ ಪ್ರತಿ ವರ್ಷ ಆಗ್ತಾ ಇದ್ದರೆ, ವಾಹನ ಹೆಚ್ಚಳ ಪ್ರಮಾಣ 10.7% ಹೆಚ್ಚಳ ಅಗ್ತಿದೆ. ಇದನ್ನ ವ್ಯವಸ್ಥಿತವಾಗಿ ಮಾಡಬೇಕು. ಇದನ್ನ ವೈಜ್ಞಾನಿಕವಾಗಿ ಮಾಡ್ತೀವಿ ಎಂದರು. ಇದನ್ನೂ ಓದಿ: ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಬೆರಸಿಕೊಟ್ಟು ಅತ್ಯಾಚಾರ: ಡಿಸಿಪಿ ಅನಿತಾ ಹದ್ದಣವರ್ ಮಾಹಿತಿ
