ಮೈಸೂರು: ಗಂಡು ಮಕ್ಕಳು ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ʻಪುರುಷ ಆಯೋಗʼ (Menʼs Commission) ರಚನೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿಂದು (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಬೇಕು. ಏಕೆಂದ್ರೆ ಗಂಡು ಮಕ್ಕಳು ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 80 ಅಡಿಗೆ ಕುಸಿದ ಕೆಆರ್‌ಎಸ್ ನೀರು – ಜಲಾಶಯಕ್ಕೆ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಭೇಟಿ
ಪುರುಷ ರಕ್ಷಣಾ ವೇದಿಕೆ ಸ್ಥಾಪನೆ
ಪೊಲೀಸ್ ಠಾಣೆಯಲ್ಲಿ ಪುರುಷರ ದೂರುಗಳಿಗೆ ಬೆಲೆ ಕೊಡುತ್ತಿಲ್ಲ. ಪುರುಷರಿಗಾಗಿಯೇ ಪುರುಷ ರಕ್ಷಣಾ ವೇದಿಕೆ ಸ್ಥಾಪಿಸಿದ್ದೇವೆ. ಪುರುಷರಿಗೆ ಆಗುವ ದೌರ್ಜನ್ಯವನ್ನ ತಡೆಯುವುದು ಈ ಸಂಘಟನೆಯ ಉದ್ದೇಶವಾಗಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಜಟ್ಟ ಖ್ಯಾತಿಯ ಗಿರಿರಾಜ್ ಹೊಸ ಚಿತ್ರದ ಟೈಟಲ್ ‘ಕಲ್ಯಾಣಿ’
