ಚಿಕ್ಕೋಡಿ: ನಗರದಲ್ಲಿ (Chikkodi) ಭಾರೀ ಮಳೆಯಾಗಿದ್ದು (Rain), ಬಸವೇಶ್ವರ ವೃತ್ತದ ಬಳಿ ಇರುವ ಕೋರ್ಟ್ (Court) ಆವರಣದಲ್ಲಿ ನೀರು ನಿಂತು ಕೆರೆಯಂತಾಗಿದೆ.
ಭಾರೀ ಮಳೆಯಿಂದ ನೀರು ಕೋರ್ಟ್ ಆವರಣಕ್ಕೆ ನುಗ್ಗಿದ್ದು, ನೀರು ಹೋಗಲು ಜಾಗವಿಲ್ಲದೇ ಕೆರೆಯಂತಾಗಿದೆ. ಇದರಿಂದ ಜನ ಓಡಾಡಲು ಪರದಾಡಿದ್ದಾರೆ. ನೀರಿನಲ್ಲೇ ಜನರು ಹಾಗೂ ವಕೀಲರು ಕೋರ್ಟ್‌ಗೆ ಬಂದಿದ್ದಾರೆ. ಜೆಸಿಬಿ ಬಳಸಿ ನೀರು ಹೋಗಲು ಸಿಬ್ಬಂದಿ ವ್ಯವಸ್ಥೆ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಮಳೆ ಅಲರ್ಟ್ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡರಿಂದ ಮೂರು ದಿನಗಳ ಕಾಲ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಈ ತಿಂಗಳು ಮುಂಗಾರು ಬಿರುಸು ಪಡೆಯುವ ಸಾಧ್ಯತೆಯಿದ್ದು, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ರಾಜ್ಯದ ಹಲವೆಡೆ ಈಗಾಗಲೇ ಉತ್ತಮ ಮಳೆಯಾಗುತ್ತಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ನಗರದಾದ್ಯಂತ ತುಂತುರು ಮಳೆ ಜೊತೆಗೆ ತಂಪು ಗಾಳಿ ಬೀಸುತ್ತಿರುವ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪ್ರೀತಿ ನಿರಾಕರಿಸಿದ ಅಪ್ರಾಪ್ತೆಯನ್ನು ನೆಲಕ್ಕೆ ಹಾಕಿ ತುಳಿದ ಪಾಗಲ್ ಪ್ರೇಮಿ
