ತಿರುವನಂತಪುರಂ: ಕೇರಳದಲ್ಲಿ (Kerala) ಕಾಂಗ್ರೆಸ್ (Congress) ಜಯಭೇರಿ ಬಾರಿಸಿದ್ದು, ಸರ್ಕಾರ ರಚನೆ ಕಸರತ್ತು ಜೋರಾಗಿದೆ. 10 ವರ್ಷಗಳ ನಂತರ ಗದ್ದುಗೆ ಹಿಡಿಯಲು ನಿಂತ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿಯೂ ಹೆಚ್ಚಾಗಿದೆ. ಯಾರಿಗೆ ಪಟ್ಟ ಕಟ್ಟಬೇಕು? ಯಾರನ್ನು ಆಯ್ಕೆ ಮಾಡಿದರೆ ಪರಿಣಾಮ ಏನಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ನಾಯಕರು ಬ್ಯುಸಿ ಆಗಿದ್ದಾರೆ.
ಈಗಾಗಲೇ ಒಂದು ರೌಂಡ್ ಮೀಟಿಂಗ್ ಮುಗಿಸಿರುವ ದೆಹಲಿ ನಾಯಕರು ತಿರುವನಂತಪುರಂಗೆ ವೀಕ್ಷಕರನ್ನು ಕಳುಹಿಸಿ ಕೊಟ್ಟಿದೆ. ಇನ್ನೇನಿದ್ದರೂ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಫುಲ್ ಸ್ಟಾಪ್ ಇಡುವ ಕೆಲಸವೊಂದೇ ಬಾಕಿ ಉಳಿದಿದೆ. ಈ ಮಧ್ಯೆ ಸಿಎಂ ರೇಸ್‌ನಲ್ಲಿ (CM Race) ನಾಲ್ಕು ಹೆಸರುಗಳು ಸಖತ್ ಚರ್ಚೆಗೆ ಬಂದಿವೆ. ಇದನ್ನೂ ಓದಿ: ಚೆನ್ನೈನಲ್ಲಿ ತಾಪಮಾನ ಹೆಚ್ಚಾಗಿದ್ದಕ್ಕೆ ಪುದುಚೇರಿಗೆ ಶಾಸಕರು ಶಿಫ್ಟ್ – ರೆಸಾರ್ಟ್ ರಾಜಕೀಯಕ್ಕೆ AIADMK ಸಮರ್ಥನೆ
ಸಿಎಂ ಆಯ್ಕೆ ಬಗ್ಗೆ ಕೇಂದ್ರ ವೀಕ್ಷಕರು ಮೊದಲು ನೂತನ ಶಾಸಕರ ಜೊತೆಗೆ ಸಭೆ ನಡೆಸುತ್ತಾರೆ. ಬಳಿಕ, ಮಿತ್ರಪ ಪಕ್ಷಗಳ ಶಾಸಕರ ಜೊತೆ ಮಾತುಕತೆ ನಡೆಸುತ್ತಾರೆ. ಕೊನೆಗೆ ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆಯನ್ನು ಅಂತಿಮಗೊಳಿಸಿ ಘೋಷಿಸಲಿದ್ದಾರೆ. ಇಷ್ಟೆಲ್ಲ ಆದಮೇಲೆ ವೀಕ್ಷಕರು ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯ ಜೊತೆಗೆ ಯುಡಿಎಫ್ ಕೂಟದ ಮಿತ್ರರಾದ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಜಾಕೋಬ್), ಆರ್‌ಎಸ್‌ಪಿ, ಆರ್‌ಎಂಪಿ, ಸಿಎಂಪಿ, ಜೆಎಸ್‌ಎಸ್, ಕೆಡಿಪಿ, ಕೇರಳ ಪ್ರವಾಸಿ ಸಂಘ, ಜನಾತಿಪತ್ಯ ರಾಷ್ಟ್ರೀಯ ಸಭಾ ಮತ್ತು ಪಿ.ವಿ.ಅನ್ವರ್ ನೇತೃತ್ವದ ರಾಜಕೀಯ ಘಟಕದ ನಾಯಕರ ಜೊತೆ ಸಮಾಲೋಚನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದಕ್ಕೆ ನನ್ನ ಪಿಎ ಹತ್ಯೆ: ಸುವೇಂದು ಅಧಿಕಾರಿ
ಸಿಎಂ ಆಯ್ಕೆ ವಿಚಾರದಲ್ಲೂ ಜಾತಿ ಲೆಕ್ಕಾಚಾರ:
ಕೇರಳ ಪಾಲಿಟಿಕ್ಸ್‌ನಲ್ಲಿ ಯುಡಿಎಫ್‌ಗೆ ಜಾತಿ ಮತ್ತು ಸಮುದಾಯದ ಬೆಂಬಲವೇ ಬಲ ನೀಡಿದೆ. ಈ ಹಿಂದೆ ನಾಯರ್ ಸಮುದಾಯವು ಬಿಜೆಪಿ ಹಾಗೂ ಎಡರಂಗದ ಮಧ್ಯೆ ಹಂಚಿಹೋಗಿದ್ದು, ಪಿಕ್ಚರ್ ಈಗ ಬದಲಾಗಿದೆ. ಇನ್ನೊಂದು ಮಗ್ಗಲಿನಲ್ಲಿ ಮುಸ್ಲಿಂ ಲೀಗ್ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಕ್ರೂಡೀಕರಿಸುವಲ್ಲಿ ಕಾಂಗ್ರೆಸ್ ಸಕ್ಸಸ್ ಕಂಡಿದೆ. ಹೀಗಾಗಿ 102 ಸ್ಥಾನಗಳ ಮೂಲಕ ಸರ್ಕಾರ ರಚಿಸುವಲ್ಲಿ ಧರ್ಮ ಮತ್ತು ಜಾತಿ ಲೆಕ್ಕಾಚಾರವೂ ಪ್ರಮುಖವಾಗುತ್ತಿದೆ. ಯುಡಿಎಫ್ (UDF) ಮೈತ್ರಿಕೂಟಕ್ಕೆ ನಾಯರ್ ಸಮುದಾಯ ಬಹುಮತ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ನೊಂದು ಮಗ್ಗಲಿನಲ್ಲಿ ನಾಯರ್ ಸಮುದಾಯದ ನಾಯಕರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಇನ್ನೊಂದು ವಾರ ತಾಪಮಾನದಲ್ಲಿ ಏರುಪೇರು – ಉತ್ತರ ಕರ್ನಾಟಕಕ್ಕೆ ಅಪ್ಪಳಿಸಲಿದೆ 42° ತಾಪಮಾನ
ಕೇರಳದಲ್ಲಿ ಸದ್ಯ ಸಿಎಂ ರೇಸ್‌ನಲ್ಲಿರುವ ನಾಲ್ವರ ಪೈಕಿ ಮೂವರು ನಾಯಕರು ನಾಯರ್ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಪ್ರಸ್ತುತ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಾಗೂ ಸನ್ನಿ ಜೋಸೆಫ್ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಬಿಜೆಪಿಯವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ: ಪರಮೇಶ್ವರ್ ಕಿಡಿ
ಕೇರಳ ಕಾಂಗ್ರೆಸ್ ಸಿಎಂ ಆಕಾಂಕ್ಷಿಗಳು ಯಾರು?
ವಿ. ಡಿ. ಸತೀಶನ್:
ಸಿಎಂ ರೇಸ್‌ನಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿಧಾನಸಭೆಯಲ್ಲಿ ಅವರು ಸರ್ಕಾರವನ್ನು ಎದುರಿಸಿದ ರೀತಿ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ. ಯುಡಿಎಫ್‌ನ ಪ್ರಬಲ ಮಿತ್ರಪಕ್ಷವಾದ ಐಯುಎಂಎಲ್ ನಾಯಕರು ಈಗಾಗಲೇ ಸತೀಶನ್ ಪರವಾಗಿ ಒಲವು ವ್ಯಕ್ತಪಡಿಸಿರುವುದು ಅವರಿಗೆ ಧನಾತ್ಮಕ ಅಂಶವಾಗಿದೆ.
ರಮೇಶ್ ಚೆನ್ನಿತ್ತಲ:
ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿ ಮತ್ತು ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿ.ಡಿ. ಸತೀಶನ್ ಜೊತೆಗೆ ಚೆನ್ನಿತ್ತಲ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ.
ಕೆ. ಸಿ. ವೇಣುಗೋಪಾಲ್:
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಹೈಕಮಾಂಡ್‌ಗೆ ಅತ್ಯಂತ ಆಪ್ತರಾಗಿದ್ದಾರೆ. ಒಂದು ವೇಳೆ ರಾಜ್ಯ ನಾಯಕರ ನಡುವೆ ಒಮ್ಮತ ಮೂಡದಿದ್ದರೆ, ಹೈಕಮಾಂಡ್ ಸೂಚನೆಯ ಮೇರೆಗೆ ಇವರು ವೈಲ್ಡ್ ಕಾರ್ಡ್ ಅಭ್ಯರ್ಥಿಯಾಗಿ ಸಿಎಂ ಸ್ಥಾನಕ್ಕೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಸನ್ನಿ ಜೋಸೆಫ್:
ಸಿಎಂ ರೇಸ್‌ನಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್ ಹೆಸರು ಸಹ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದರೆ ಸನ್ನಿಗೆ ಅವಕಾಶ ಹೆಚ್ಚುವ ಸಾಧ್ಯತೆ ಇದೆ.
ಹೀಗೆ ನಾಲ್ವರ ಪೈಕಿ ರಮೇಶ್ ಚೆನ್ನಿತ್ತಲ, ವಿ.ಡಿ.ಸತೀಶನ್ ಹಾಗೂ ಕೆ.ಸಿ.ವೇಣುಗೋಪಾಲ್ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಸದ್ಯ ಹೊಸದಾಗಿ ಆಯ್ಕೆಯಾದ 63 ಶಾಸಕರಲ್ಲಿ ವೇಣುಗೋಪಾಲ್‌ಗೆ 47 ಶಾಸಕರ ಬೆಂಬಲವಿದ್ದು, ಸತೀಶನ್‌ಗೆ 10 ಶಾಸಕರ ಬೆಂಬಲವಿದೆ. ಇತ್ತ ಚೆನ್ನಿತ್ತಲ ಅವರಿಗೆ 6 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ. ವೇಣುಗೋಪಾಲ್ ಮತ್ತು ಚೆನ್ನಿತ್ತಲ ಜೊತೆಗಿರುವ ಶಾಸಕರನ್ನು ತಮ್ಮ ಕಡೆಗೆ ಕರೆತರಲು ಸತೀಶನ್ ಬಣ ಪ್ರಯತ್ನಿಸುತ್ತಿದೆ. ಶಾಸಕರು ಮತ್ತು ವೀಕ್ಷಕರ ಸಭೆಯಲ್ಲಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದೀಪದಾಸ್ ಮುನ್ನಿ ಅವರನ್ನು ಹೊರಗಿಡಬೇಕೆಂದು ಸತೀಶನ್ ಬಣ ಒತ್ತಾಯಿಸಿದೆ. ವೀಕ್ಷಕರೊಂದಿಗಿನ ಸಭೆಯಲ್ಲಿ ದೀಪದಾಸ್ ಮುನ್ನಿ ಹಾಜರಿದ್ದರೆ ಶಾಸಕರು ಪ್ರಭಾವಿತರಾಗುತ್ತಾರೆ ಎಂದು ಸತೀಶನ್ ಬಣ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕೇರಳದಲ್ಲೂ ಕುರ್ಚಿಗಾಗಿ ಫೈಟ್ – ಕೊಟ್ಟರೆ ಸಿಎಂ ಸ್ಥಾನ ಕೊಡಿ, ಇಲ್ಲದಿದ್ರೆ ಶಾಸಕನಾಗಿಯೇ ಇರ್ತೀನಿ: ವಿ.ಡಿ ಸತೀಸನ್
ಆಪ್ತನಿಗೆ ಸಿಎಂ ಕುರ್ಚಿ ಕೊಡುತ್ತಾರಾ ರಾಹುಲ್?
ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ರಾಷ್ಟ್ರೀಯ ನಾಯಕರು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಧಿಕೃತಗೊಳಿಸಲು ಎಐಸಿಸಿ ವೀಕ್ಷಕರಾಗಿ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಅನ್ನು ಆಯ್ಕೆ ಮಾಡಿದೆ. ಸದ್ಯ ಕಾಂಗ್ರೆಸ್‌ಗೆ, ಮುಂದಿನ ಸಿಎಂ ಆಯ್ಕೆ ಕಗ್ಗಂಟಾಗಿದೆ. ಹೀಗಾಗಿ ಸರ್ಕಾರ ರಚನೆಯ ಭಾಗವಾಗಿ ಶಾಸಕರ ಹಾಗೂ ಪಕ್ಷದ ನಾಯಕರ ಅಭಿಪ್ರಾಯ ಪಡೆಯಲು ದೆಹಲಿ ನಾಯಕರು ಮುಂದಾಗಿದ್ದಾರೆ. ಈಗಾಗ್ಲೆ ತಿರುವನಂತಪುರಂಗೆ ತಲುಪಿರುವ ವೀಕ್ಷಕರ ತಂಡ ಮುಂದಿನ ಗೇಮ್ ಪ್ಲಾನ್ ರೆಡಿ ಮಾಡುತ್ತಿದೆ. ಇದನ್ನೂ ಓದಿ: ಬಿಹಾರದಲ್ಲಿ ಹೊಸ ರಾಜಕೀಯ ಪರ್ವ ಶುರು – ನಿತೀಶ್ ಕುಮಾರ್ ಪುತ್ರ ಸೇರಿ 31 ಮಂದಿ ಸಚಿವರಾಗಿ ಪ್ರಮಾಣ ಸ್ವೀಕಾರ
ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಜನಪ್ರಿಯತೆಯಷ್ಟೇ ಮುಖ್ಯವಲ್ಲ. ಬದಲಿಗೆ ಜನ ಬೆಂಬಲದ ಜೊತೆಗೆ ಶಾಸಕರ ಬೆಂಬಲವೂ ನಿರ್ಣಾಯಕವಾಗಲಿದೆ. ಹೀಗಾಗಿ ಕೆ.ಸಿ ವೇಣುಗೋಪಾಲ್ ಪರವಾಗಿ ಬೆಂಬಲಿಗರು ಧ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಕಟ್ಟಾ ನಿಷ್ಠಾವಂತರಲ್ಲಿ ವೇಣುಗೋಪಾಲ್ ಕೂಡ ಒಬ್ಬರಾಗಿದ್ದಾರೆ. ಇದರಿಂದ, ರಾಹುಲ್ ನಿರ್ಧಾರವೂ ಕೇರಳಂ ಮುಖ್ಯಮಂತ್ರಿ ಆಯ್ಕೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದೇ ಹೇಳಲಾಗುತ್ತಿದೆ. ಇದನ್ನೂ ಓದಿ: ಎಲ್ಲಾ ಬಂಡವಾಳ ಗುಜರಾತ್‌ಗೆ ಹೋಗ್ತಿದೆ, ಐಪಿಎಲ್ ಸಹ ಹೈಜಾಕ್ ಮಾಡಿದ್ದಾರೆ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಒಟ್ಟಿನಲ್ಲಿ ಕೇರಳದಲ್ಲಿ ಗದ್ದುಗೆ ಹಿಡಿಯಲು ಮುಂದಾದ ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಕೇರಳದಲ್ಲಿ ನೂತನ ಶಾಸಕರ ಅಭಿಪ್ರಾಯ ಕಲೆ ಹಾಕಲಿರುವ ಎಐಸಿಸಿ ವೀಕ್ಷಕರು ಹೈಕಮಾಂಡ್‌ಗೆ ಫೈನಲ್ ರಿಪೋರ್ಟ್ ಸಲ್ಲಿಸಲಿದ್ದಾರೆ. ಅದಾದ ಬಳಿಕ ಸಿಎಂ ಆಯ್ಕೆ ಫೈನಲ್ ಆಗಲಿದ್ದು, ಪದಗ್ರಹಣಕ್ಕೆ ಇನ್ನಷ್ಟೇ ಮುಹೂರ್ತ ಫಿಕ್ಸ್ ಆಗಬೇಕಿದೆ. ಇದನ್ನೂ ಓದಿ: ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಹಣ ದೋಚಿದ ಸೈಬರ್ ವಂಚಕರು!

