ಬೆಂಗಳೂರು: ಮುಂದಿನ 1 ವಾರಗಳ ಕಾಲ ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರು ಕಂಡುಬರಲಿದೆ. ಒಂದೆಡೆ ಸುಡುವ ಬಿಸಿಲು, ಒಣಹವೆ ಹಾಗೂ ಮತ್ತೊಂದೆಡೆ ಮಳೆಯ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಲ್ಲಿ ಸೂರ್ಯನ ತಾಪ ವಿಪರೀತವಾಗಿರಲಿದೆ. ವಾರಪೂರ್ತಿ ಸುಮಾರು 42 ಡಿಗ್ರಿ ಸೆಲ್ಸಿಯಸ್ ತಾಪಮಾನದ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ನಿನ್ನ ಸಂಬಳ ಎಷ್ಟು? ಇಎಂಐ ಎಷ್ಟು? – ದುಡಿಮೆಗಿಂತ ಹೆಚ್ಚಿನ ವಹಿವಾಟು: ಪಾಲಿಕೆ ಸಿಬ್ಬಂದಿಗೆ ಲೋಕಾಯುಕ್ತ ಕ್ಲಾಸ್

ನಿನ್ನೆ ಕಲಬುರಗಿಯಲ್ಲಿ 41.6 ಡಿಗ್ರಿ ದಾಖಲಾಗಿದೆ. ಬೆಳಗಾವಿ ಹಾಗೂ ಧಾರವಾಡ ಭಾಗದಲ್ಲಿ 38 ಡಿಗ್ರಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ 37 ಡಿಗ್ರಿಯಷ್ಟು ಬಿಸಿಲಿರಲಿದೆ. ಬೆಂಗಳೂರಿನಲ್ಲಿ ತಾಪಮಾನ 36 ಡಿಗ್ರಿ ಆಸುಪಾಸಿನಲ್ಲಿ ಇರಲಿದೆ.
ಬಿಸಿಲಿನ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಪ ಮಳೆ ಸಾಧ್ಯತೆಯೂ ಇದೆ. ಹವಾಮಾನ ಇಲಾಖೆಯು ಇಂದು ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಸೇರಿದಂತೆ ಒಟ್ಟು 15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಇದನ್ನೂ ಓದಿ: 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ – 15ರ ಬಾಲಕ ಆತ್ಮಹತ್ಯೆ
ಮುಂದಿನ ಒಂದು ವಾರ ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಮಯದಲ್ಲಿ ಸುಮಾರು 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ, 2019ರ ನನ್ನ ಸೋಲು ಪಕ್ವತೆ ಕಲಿಸಿದೆ: ನಿಖಿಲ್ ಕುಮಾರಸ್ವಾಮಿ

