ಮಡಿಕೇರಿ: ಸಿನಿಮೀಯ ಶೈಲಿಯಲ್ಲಿ 40 ಅಡಿ ಆಳದ ಕಂದಕಕ್ಕೆ ಕಾರು (Car) ಉರುಳಿ ಬಿದ್ದ ಘಟನೆ ಮಡಿಕೇರಿ-ಮೂರ್ನಾಡು ರಸ್ತೆಯಲ್ಲಿ ನಡೆದಿದೆ.
ಆಲ್ವೇಸ್ ಸರ್ವಿಸ್ ಸ್ಟೇಷನ್ ಸಮೀಪ ಘಟನೆ ನಡೆದಿದ್ದು, ಮೂರ್ನಾಡು (Murnad) ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕಂದಕಕ್ಕೆ ಉರುಳಿ ಬಿದ್ದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು
ಅಪಘಾತದಿಂದ ವಾಹನಕ್ಕೆ ಭಾರೀ ಹಾನಿಯಾಗಿದೆ. ಕಾರಿನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಂಬಳವನ್ನು ತವರಿಗೆ ಕಳುಹಿಸುತ್ತಿದ್ದ ಹೆಂಡತಿ – 2 ಲಕ್ಷ ಸುಪಾರಿ ಕೊಟ್ಟು ಪತ್ನಿಯ ಹತ್ಯೆಗೈದ ಪತಿ
