DistrictsKarnatakaLatestLeading NewsMain PostMysuru

ಇಂದು ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ಹಬ್ಬದ ಸಂಭ್ರಮ

- ದೇವಿ ದರ್ಶನಕ್ಕೆ ವ್ಯಾಕ್ಸಿನ್ ಕಡ್ಡಾಯ

Advertisements

ಮೈಸೂರು: ಇಂದು ಆಷಾಢ ಮಾಸ ಮೊದಲ ಶುಕ್ರವಾರ. ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆ. ಹೀಗಾಗಿ ಆಷಾಢದ ಎಲ್ಲಾ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರ್ತಾರೆ. ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಸಕಲ ವ್ಯವಸ್ಥೆಗಳು ಆಗಿವೆ.

ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರಿಗೆ ನ್ಯೂ ರೂಲ್ಸ್ ಮಾಡಲಾಗಿದೆ. ಎರಡು ಡೋಸ್ ಕೊರೋನಾ ಲಸಿಕೆ ಕಡ್ಡಾಯ ಹಾಕಿಸಿರಬೇಕು. ಇಲ್ಲದಿದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಇರಬೇಕು. ಹಾಗಿದ್ರೆ ಮಾತ್ರ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರಲಿದೆ. ಮುಂಜಾನೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶವಿದೆ. ಇದನ್ನೂ ಓದಿ: ಶಿಂಧೆ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಟೇಬಲ್ ಹತ್ತಿ ಡ್ಯಾನ್ಸ್ ಮಾಡಿದ ಬಂಡಾಯ ಶಾಸಕರು

ಭಕ್ತರಿಗೆ ಮೂರು ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮಳೆ-ಬಿಸಿಲು ರಕ್ಷಣೆಗೆ ಟೆಂಟ್ ನಿರ್ಮಿಸಲಾಗಿದೆ. ದೇವಸ್ಥಾನದ ಮುಂಭಾಗ ಬೆಳಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳು ಭಕ್ತರಿಗೆ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಸಾದ ರೂಪದಲ್ಲಿ ಹಾರ್ಲಿಕ್ಸ್, ಮೈಸೂರು ಪಾಕ್ ವಿತರಣೆ ಮಾಡಲು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಮುಂದಾಗಿದೆ.

30 ಮಂದಿ ಬಾಣಸಿಗರು 30 ಸಾವಿರ ಮೈಸೂರು ಪಾಕ್ ತಯಾರಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಇದೆ. ಭಕ್ತರು ಲಲಿತ್ ಮಹಲ್ ಬಳಿಯ ಮೈದಾನದಲ್ಲಿ ತಮ್ಮ ವಾಹನ ನಿಲ್ಲಿಸಿ, ಉಚಿತವಾಗಿ ಬಸ್‍ನಲ್ಲಿ ಬೆಟ್ಟಕ್ಕೆ ಹೋಗುವ ವ್ಯವಸ್ಥೆ ಇದೆ.

Live Tv

Leave a Reply

Your email address will not be published.

Back to top button