ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಭೂ ವಿವಾದ ಬಗೆಹರಿಸುವುದಾಗಿ ಗ್ರಾಮಸ್ಥರಿಂದ ವಸೂಲಿ ಮಾಡಲಾಗಿದ್ದ ಹಣವನ್ನು (Cut Money) ತೃಣಮೂಲ ಕಾಂಗ್ರೆಸ್ (TMC) ನಾಯಕರು ಮತ್ತು ಕಾರ್ಯಕರ್ತರು ವಾಪಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂಚಾಗಢ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರ್ ಕುತ್ತಿ ಪ್ರದೇಶದ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಕರೆದು ಸ್ಥಳೀಯ ಟಿಎಂಸಿ ನಾಯಕರು ಗ್ರಾಮಸ್ಥರಿಗೆ ಹಣ ಹಿಂತಿರುಗಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬೂತ್ ಅಧ್ಯಕ್ಷ ತಪನ್ ಡೇ ಹಲವು ಗ್ರಾಮಸ್ಥರಿಂದ ವಸೂಲಿ ಮಾಡಿದ್ದ ಹಣವನ್ನು ಹಿಂದಿರುಗಿಸಿದ್ದಾರೆ. ಸ್ಥಳೀಯ ಟಿಎಂಸಿ ಮುಖಂಡ ಬಾಬೈ ಬರ್ಮನ್ ತಲೆಮರೆಸಿಕೊಂಡಿದ್ದು, ಅವರ ಪರವಾಗಿ ಅವರ ತಂದೆ ಹಣ ವಾಪಸ್ ನೀಡಿದ್ದಾರೆ. ಇದನ್ನೂ ಓದಿ: ಅಭಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ, ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗ್ತಿದೆ – ನನ್ನ ಅಳಿಯನ ಕೊಲೆಗೆ ಬಿಜೆಪಿ ಸಂಚು: ದೀದಿ ಗಂಭೀರ ಆರೋಪ
ঠেলার নাম বাবাজি!
Amid a growing number of arrests of TMC leaders on corruption charges, some local party leaders now have started returning money allegedly collected as “cut money” from beneficiaries of various government schemes—possibly to avoid legal action and public… pic.twitter.com/hnBsnb3c4E
— Piyali Mitra (@Plchakraborty) June 1, 2026
ಪಂಚಾಯಿತಿ ಸದಸ್ಯರು ಮತ್ತು ಕೆಲ ಟಿಎಂಸಿ ನಾಯಕರು ಸೇರಿ ಗ್ರಾಮಸ್ಥರಿಂದ ಸುಮಾರು 80 ಲಕ್ಷ ರೂ. ಹಣ ಸಂಗ್ರಹಿಸಿದ್ದರು. ಕಾನೂನು ಕ್ರಮದ ಭಯದಿಂದ ಈಗ ಕೆಲವು ನಾಯಕರು ಹಣ ವಾಪಸ್ ನೀಡಲು ಮುಂದಾಗಿದ್ದಾರೆ. ಎಂದು ಸ್ಥಳೀಯ ಬಿಜೆಪಿ (BJP) ಘಟಕದ ಅಧ್ಯಕ್ಷ ಸುರೇಂದ್ರ ಬರ್ಮನ್ ಹೇಳಿದರು.
Once in a generation, a moment like this arrives❤️
Cut money taken by those associated with TMC is being returned to villagers
This is what restoration of democracy looks like after BJP came into power in Bengal
Media may not show you this, but the people are witnessing it… pic.twitter.com/Lu4V4sLf1E
— Lala (@FabulasGuy) June 1, 2026
ಈ ಬೆಳವಣಿಗೆ ಗ್ರಾಮಸ್ಥರಲ್ಲಿ ಗೊಂದಲ ಉಂಟುಮಾಡಿದೆ. ಕೆಲವರು ತಮ್ಮ ಹಣ ಮರಳಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ನಡೆದ ಘಟನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಭೂ ವಿವಾದ ಬಗೆಹರಿಸುವುದಾಗಿ ಹೇಳಿ ಸ್ಥಳೀಯ ಟಿಎಂಸಿ ನಾಯಕರು ನಮ್ಮಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಆದರೆ ಯಾವುದೇ ಕೆಲಸ ಮಾಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ. ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ದೀದಿ ಅಳಿಯ, ಎಂಪಿ ಅಭಿಷೇಕ್ ಬ್ಯಾನರ್ಜಿಗೆ ಮೊಟ್ಟೆ ಏಟು – ಸುತ್ತುವರಿದು ಹಲ್ಲೆ
