– ಹಿಂದೂಪರ ಸಂಘಟನೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
– ಹಿಂದೂಗಳ ಮೇಲೆ ಹಾಕಿದ ಪ್ರಕರಣ ಹಿಂಪಡೆಯುವಂತೆ ಆಗ್ರಹ
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಮೇ 24ರಂದು ಮುಸ್ಲಿಂ ಯುವಕರು ಮುರಿನಕಟ್ಟೆ (Murinakatte) ಧ್ವಂಸ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಹಿಂದೂಪರ ಸಂಘಟನೆಗಳು ಭಟ್ಕಳ ಬಂದ್‌ಗೆ ಕರೆ ಕೊಟ್ಟಿದ್ದು ಮತ್ತೆ ವಿವಾದ ಭುಗಿಲೆದ್ದಿದೆ.
ಮೇ 24ರಂದು ಭಟ್ಕಳದ ಶಿರಾಲಿಯ ವೆಂಕಟಾಪುರ ನದಿ ತೀರದ ಬಳಿ ಕಪ್ಪೆಚಿಪ್ಪು ಹೆಕ್ಕಲು ಹೋದ ಮಹಿಳೆಯರೂ ಸೇರಿ 11 ಜನ ಮೃತಪಟ್ಟಿದ್ದರು. ಇಡೀ ಭಟ್ಕಳಕ್ಕೆ ದೊಡ್ಡ ಶಾಕ್ ತಂದಿದ್ದ ಈ ಘಟನೆ ಜನರು ದುಃಖದಲ್ಲಿ ಇರುವಂತೆ ಮಾಡಿತ್ತು. ನದಿ ತೀರಭಾಗದಲ್ಲಿ ಶವಗಳನ್ನ ಹುಡುಕುತ್ತಾ ಸೇರಿದ್ದ ಜನ ನೋವಿನಲ್ಲಿದ್ದರು. ಆದರೇ ಇದೇ ಸಂದರ್ಭದಲ್ಲಿ ರಾತ್ರಿಯಾಗುತಿದ್ದಂತೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ಮುರಿನಕಟ್ಟೆಯ ಭಾಗದಲ್ಲಿ ಸೇರಿದ ಮತಾಂಧ ಮುಸ್ಲೀಮರು ನಿರ್ಮಾಣ ಹಂತದಲ್ಲಿ ಇದ್ದ ಮುರಿನಕಟ್ಟೆಯನ್ನ ಪೊಲೀಸರ ಎದುರಿನಲ್ಲೇ ಧ್ವಂಸ ಮಾಡಿದರು. ತಡೆಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದರು. ರಾತ್ರೋ ರಾತ್ರಿ ಸೇರಿದ್ದ ಮುಸ್ಲೀಮರ ಗುಂಪು ಮಾಡಬಾರದ ಕೆಲಸ ಮಾಡಿ ಹಿಂದೂಗಳ ಆತ್ಮ ಗೌರವಕ್ಕೆ ಧಕ್ಕೆ ತಂದರು. ರಸ್ತೆ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿ ಇದ್ದ ಕಟ್ಟೆ ಕೆಡವಿ ನಾವು ಬಾಬರಿ ಮಸೀದಿ ಧ್ವಂಸದ ಸೇಡು ತೀರಿಸಿಕೊಂಡೆವು ಎನ್ನುವ ರೀತಿಯಲ್ಲಿ ಮತಾಂದರು ಮೆರೆದಿದ್ದರು.
ಇನ್ನು ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಯಕಾರ್ಯಕರ್ತರು ,ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ಮಾಡಿದರು. ಆಕ್ರೋಶ ಹೊರಹಾಕಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲೇ ಮತ್ತೆ ಕಟ್ಟೆ ಕಟ್ಟುವ ಪಣ ತೊಟ್ಟರು. ಭಟ್ಕಳ ನಗರದ ರಸ್ತೆಯ ಮೂಲೆಯಲ್ಲಿದ್ದ ಈ ಕಟ್ಟೆ ವಿವಾದ ರಾತ್ರೋ ರಾತ್ರಿ ಇಡೀ ರಾಜ್ಯದಲ್ಲಿ ಸದ್ದು ಮಾಡಿತು. ವಿಷಯ ವಿಕೋಪಕ್ಕೆ ಹೋಗುತಿದ್ದಂತೆ ಮೇ 25 ರಂದು ಬೆಳಗ್ಗೆ 6 ಗಂಟೆಯಿಂದ ಮೇ 27 ರ ವರೆಗೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ-2023ರ ಕಲಂ 163 (ಹಳೆಯ ಸಿಆರ್‌ಪಿಸಿ ಕಲಂ 144) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಇದಲ್ಲದೇ ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಹೇರಲಾಯಿತು. ಡಿ.ಆರ್ ತುಕಡಿ, ಕೆಎಸ್‌ಆರ್‌ಪಿ ತುಕಡಿ ಜೊತೆ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಯಿತು. ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರಲು ಪೊಲೀಸರು ಒಟ್ಟು ಐದು ಪ್ರಕರಣ ದಾಖಲಿಸಿದರು. ಇದಲ್ಲದೇ ಗಲಭೆ ನಡೆಸಿ ಕಟ್ಟೆ ಒಡೆದುಹಾಕಿದ ಅಪ್ರಾಪ್ತ ಮಕ್ಕಳು ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಮುಸ್ಲೀಮರ ಪ್ರಚೋಧನೆಗೆ ಕಾರಣನಾದ ಭಟ್ಕಳದ ಆಜಾದ್ ನಗರದ ಮೋತಿಬ್ ಮೊಹ್ಮದ್ ನನ್ನ ಬಂಧಿಸಿ ಪ್ರಕರಣ ದಾಖಲಿಸಲಾಯಿತು. ಇನ್ನು ಈ ಪ್ರಕರಣ ಸಂಬಂಧ 40ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಇನ್ನು ಬಂಧಿತರಲ್ಲಿ ಹಾಗೂ ಪ್ರಕರಣ ದಾಖಲಾದವರಲ್ಲಿ ಹಿಂದೂಗಳೇ ಅತೀ ಹೆಚ್ಚಿದ್ದು, ಗಲಾಟೆ ಮಾಡಿದ ಪ್ರಮುಖ ಮುಸ್ಲಿಂ ನಾಯಕರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಬದಲಿಗೆ ಹಿಂದೂ ಕಾರ್ಯಕರ್ತರ ಮೇಲೆ ಹೆಚ್ಚಿನ ಪ್ರಕರಣ ದಾಖಲಿಸಿದ್ದು, ಭಟ್ಕಳದ ಮಾಜಿ ಶಾಸಕ ಸುನಿಲ್ ನಾಯ್ಕ, ಗೋವಿಂದನಾಯ್ಕ ಸೇರಿದಂತೆ 30ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಹಿಂದೂ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿದೆ. ಗಲಾಟೆ ಮಾಡಿದವರನ್ನ ಹೊರತುಪಡಿಸಿ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ಬಿಜೆಪಿ ಪ್ರತಿಭಟನೆ ನಂತರವೂ ಇದೀಗ ವಿವಿಧ ಹಿಂದೂಪರ ಸಂಘಟನೆ ಶುಕ್ರವಾರ ಮಧ್ಯಾಹ್ನ ಭಟ್ಕಳ ಸ್ವಯಂ ಪ್ರೇರಿತ ಬಂದ್‌ಗೆ ಕರೆಕೊಟ್ಟಿದ್ದು, ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಚನ್ನಪಟ್ಟಣ ಹನುಮದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿ ಬಳಿ ಮನವಿ ಸಲ್ಲಿಸಲಿದ್ದಾರೆ. ಇನ್ನು ಹಿಂದೂಗಳ ಮೇಲೆ ಹಾಕಿದ ಪ್ರಕರಣವನ್ನ ಹಿಂಪಡೆಯಬೇಕು ಹಾಗೂ ಯಾರು ಪ್ರಮುಖ ಪಾತ್ರರಿದ್ದಾರೋ ಅವರನ್ನ ಬಂಧಿಸಬೇಕು ಎಂಬುದು ಹಿಂದೂಪರ ಸಂಘಟನೆ ಆಗ್ರಹ. ಇನ್ನು ಧ್ವಂಸವಾದ ಕಟ್ಟೆಯ ಜಾಗದ ಬದಲು ಜಿಲ್ಲಾಡಳಿತ ಅದೇ ಭಾಗದ ರಸ್ತೆಯ ಮಧ್ಯಭಾಗದಲ್ಲಿ ಕಟ್ಟೆ ಕಟ್ಟಲು ವ್ಯವಸ್ಥೆ ಮಾಡಿದೆ. ಈ ಕುರಿತು ಕುದ್ದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದು, ಕೆಲವು ದಿನದಲ್ಲೇ ಕಟ್ಟೆ ನಿರ್ಮಾಣ ಆಗಲಿದೆ ಎಂದಿದ್ದಾರೆ. ಇದಲ್ಲದೇ ಕಟ್ಟೆ ಭಾಗದಲ್ಲಿ ಕಬ್ಬಿಣದ ಗ್ರಿಲ್‌ಗಳನ್ನ ಅಳವಡಿಸಿ ಬಂದೋಬಸ್ತ್ ಮಾಡುವ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗಳು ಸಹ ಮಾಧ್ಯಮ ಪ್ರಕಟಣೆ ಹೊರಡಿಸಿ ಜಾಗ ನಿಗದಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಧ್ವಂಸಗೊಂಡ ವಿವಾಧಿತ ಮುರಿನ ಕಟ್ಟೆ ಜಾಗದ ಬದಲಿಗೆ ಅಲ್ಲಿಯೇ ಪಕ್ಕದಲ್ಲಿ ಆಡಳಿತ ಜಾಗ ನೀಡಿ ಶೀಘ್ರ ಕಟ್ಟೆ ನಿರ್ಮಿಸಿ ವಿವಾದವನ್ನ ಶಮನ ಮಾಡುವ ಪ್ರಯತ್ನ ಮಾಡಿತ್ತು. ಆದರೆ ಎಲ್ಲಿ ಗಲಾಟೆ ಮಾಡಿದ ಮುಸ್ಲಿಂ ಮುಖಂಡರನ್ನ ಹೊರತುಪಡಿಸಿ, ಪೊಲೀಸರ ಪರವಾಗಿ ನಿಂತ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಹೆಚ್ಚಿನ ಪ್ರಕರಣ ದಾಖಲು ಮಾಡಿದ್ದು, ಇದೀಗ ಮತ್ತೆ ವಿವಾದ ಭುಗಿಲೇಳುವಂತೆ ಮಾಡಿದೆ.













