ಮುಂಬೈ: ದೇಶದಲ್ಲಿ ಮುಂಗಾರು ಪ್ರವೇಶಿಸಿದರೂ ಮುಂಬೈನಲ್ಲಿ (Mumbai Water Crisis) ಮಳೆಯ ಕೊರತೆ ಎದುರಾಗಿದೆ. ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತ ಕಂಡಿದೆ. ಈ ಹಿನ್ನೆಲೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಗರದಾದ್ಯಂತ ನೀರು ಸಂರಕ್ಷಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿಗೆ ತಂದಿದೆ.
ಹೊಸ ನಿರ್ದೇಶನದ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಯೋಜನೆಗಳಿಗೆ ಒದಗಿಸಲಾದ ಎಲ್ಲಾ ನೀರಿನ ಸಂಪರ್ಕಗಳನ್ನ ತಾತ್ಕಾಲಿಕವಾಗಿ ಕಡಿತಗೊಳಿಸಲಾಗುತ್ತದೆ. ನಿರ್ಮಾಣ ಚಟುವಟಿಕೆಗಳಿಗಾಗಿ ಹೊಸ ನೀರಿನ ಸಂಪರ್ಕಗಳ ಅನುಮೋದನೆಯನ್ನು ಸಹ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ. ನೀರಿನ ಅಗತ್ಯಗಳಿಗೆ ಆದ್ಯತೆ ನೀಡುವ ಪ್ರಯತ್ನಗಳ ಭಾಗವಾಗಿ ನಗರದಾದ್ಯಂತ ಇರುವ ಈಜುಕೊಳಗಳಿಗೆ ನೀರಿನ ಸರಬರಾಜು ಸಂಪರ್ಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು ಶೇ.20 ರಷ್ಟು ನೀರು ಕಡಿತ ಎದುರಿಸಬೇಕಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೆ 1.28 ಲಕ್ಷ ರೂ ಸಾಲ
ಕೈಗಾರಿಕಾ ಘಟಕಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕ್ರೀಡಾ ಕ್ಲಬ್‌ಗಳಿಗೆ ನೀರಿನ ಪೂರೈಕೆಯಲ್ಲಿ ಶೇ.20 ರಷ್ಟು ಕಡಿತಗೊಳಿಸಲಾಗಿದೆ. ಪ್ಯಾಕೇಜ್ ಕುಡಿಯುವ ನೀರು (ವಾಟರ್ ಬಾಟಲ್) ಮತ್ತು ಪಾನಿಯಾ ತಯಾರಕರು ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸಬೇಕು. ನೀರಿನ ಕೊರತೆಯ ಸಮಯದಲ್ಲಿ ಅನಗತ್ಯ ನೀರು ಪೋಲು ಮಾಡದೇ ಲಭ್ಯವಿರುವ ನೀರಿನ ಸಂಪನ್ಮೂಲ ಬಳಸಿಕೊಳ್ಳಬೇಕು. ಕುಡಿಯುವ ನೀರನ್ನು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಮುಂಬೈಗೆ ನೀರು ಪೂರೈಸುವ ಜಲಾಶಯಗಳಲ್ಲಿ ನೀರಿನ ಸಾಮರ್ಥ್ಯ ಶೇ.10.35ಕ್ಕೆ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮುಂಬೈನಲ್ಲಿ ಮಳೆಯಾಗುವ ತನಕ ಕುಡಿಯುವ ನೀರಿನ ಪೂರೈಕೆಯನ್ನು ಸುಧಾರಿಸಲು ಬಿಎಂಸಿ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಈ ಹೊಸ ಮಾರ್ಗಸೂಚಿಗಳು ಜೂನ್ 17 ರಿಂದಲೇ ಅನ್ವಯವಾಗಲಿವೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ಅತ್ಯಗತ್ಯವಲ್ಲದ ನೀರಿನ ಬಳಕೆಯ ನಿರ್ಬಂಧ ವಿಧಿಸಲಾಗಿದೆ. ಮೇ 15 ರಿಂದಲೇ ಮುಂಬೈನಲ್ಲಿ ಶೇ.10 ರಷ್ಟು ನೀರಿನ ಬಳಕೆಯನ್ನು ಕಡಿಮೆ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ಟೆಕ್ಕಿ ಅನುಮಾನಾಸ್ಪದ ಸಾವು – ಹೋಂಸ್ಟೇ ಕೊಠಡಿಯಲ್ಲಿ ಮಹಿಳೆ ಶವ ಪತ್ತೆ
