
ಮುಂಬೈ: ರಾಜ್ಯದಲ್ಲಿ 2020ರ ಮಾರ್ಚ್‍ನಲ್ಲಿ ಕೊರೊನಾ (Corona) ಕೇಸ್ ದಾಖಲಾದ ಬಳಿಕ ಸುಮಾರು ಎರಡೂವರೆ ವರ್ಷಗಳ ನಂತರ ಶೂನ್ಯ ಪ್ರಕರಣ ದಾಖಲಾಗಿದೆ.
ಮಂಗಳವಾರ ದೈನಂದಿನ ಪ್ರಕರಣಗಳ ಪೈಕಿ ಮುಂಬೈನಲ್ಲಿ (Mumbai) ಶೂನ್ಯ ಪಾಸಿಟಿವ್ ಕೇಸ್ (Positive Case) ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,772 ಮಂದಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು ಆದರೆ ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ. ಈ ಮೂಲಕ 2020ರ ಮಾರ್ಚ್ ಬಳಿಕ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು
ಮುಂಬೈನಲ್ಲಿ ಜನವರಿ ಮೊದಲ ವಾರದಲ್ಲಿ 20,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿತ್ತು. ಸದ್ಯ 23 ಸಕ್ರಿಯ ಪ್ರಕರಣ ಮುಂಬೈನಲ್ಲಿದೆ. ಇದನ್ನೂ ಓದಿ: ದೆಹಲಿ ಮಾದರಿಯಲ್ಲೇ Hit & Run Case: ಬೈಕ್‌ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿಮೀ ಎಳೆದೊಯ್ದ ಕಾರು – ವ್ಯಕ್ತಿ ಸಾವು
ಮುಂಬೈನಲ್ಲಿ 2020ರ ಮಾರ್ಚ್ 9 ರಂದು ಮೊದಲ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆ ಬಳಿಕ ಈವರೆಗೆ 11,55,240 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಶೂನ್ಯಕ್ಕೆ ತಲುಪಿದೆ. ದೆಹಲಿಯಲ್ಲಿ ಜ.16 ರಂದು ಶೂನ್ಯ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆ ಬಳಿಕ ಇದೀಗ ಮುಂಬೈನಲ್ಲಿ ದಾಖಲಾಗಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k