ದೆಹಲಿ ಮಾದರಿಯಲ್ಲೇ Hit & Run Case: ಬೈಕ್‌ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿಮೀ ಎಳೆದೊಯ್ದ ಕಾರು – ವ್ಯಕ್ತಿ ಸಾವು

ಗಾಂಧೀನಗರ: ದೆಹಲಿಯಲ್ಲಿ (Delhi) ಯುವತಿಗೆ ಕಾರು ಡಿಕ್ಕಿ ಹೊಡೆದು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಮಾದರಿಯಲ್ಲೇ ಗುಜರಾತ್‌ನಲ್ಲೂ (Gujarat Hit And Run) ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದು 12 ಕಿಮೀ ಎಳೆದೊಯ್ದ ಪರಿಣಾಮ, ಸವಾರ ಸಾವಿಗೀಡಾಗಿದ್ದಾನೆ.
ಸೂರತ್‌ನಲ್ಲಿ (Surat) ಜನವರಿ 18 ರಂದು 24 ವರ್ಷದ ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡದು 12 ಕಿಮೀ ಎಳೆದೊಯ್ದಿದೆ. ಘಟನೆಯ ವೀಡಿಯೋವನ್ನು ವಾಹನದ ಹಿಂದೆಯೇ ಚಲಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಚಿತ್ರೀಕರಿಸಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿರುವ ಸೂರತ್ ಪೊಲೀಸರಿಗೆ ಆ ವ್ಯಕ್ತಿ ವೀಡಿಯೋವನ್ನು ಹಸ್ತಾಂತರಿಸಿದ್ದಾನೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್‍ಯುನಲ್ಲಿ ಇಂಟರ್‌ನೆಟ್, ವಿದ್ಯುತ್ ಸ್ಥಗಿತ
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯೊಂದಿಗೆ ಜ.18 ರ ರಾತ್ರಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ. ನಂತರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದೆ.
“ಸಂತ್ರಸ್ತ ಸಾಗರ್ ಪಾಟೀಲ್ ತನ್ನ ಪತ್ನಿ ಅಶ್ವಿನಿಬೆನ್ ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಕಾರು ನಿಲ್ಲಿಸದೆ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ” ಎಂದು ಸೂರತ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜೋಯ್ಸರ್ ತಿಳಿಸಿದ್ದಾರೆ. ಇದನ್ನೂ ಓದಿ: Viral Video: ನಾಗವಲ್ಲಿ ವೇಷ ತೊಟ್ಟು ಮೆಟ್ರೋ ಪ್ರಯಾಣಿಕರನ್ನು ಹೆದರಿಸಿದ ಮಹಿಳೆ – ಬೇಸತ್ತು ಸೀಟ್ ಬಿಟ್ಟ ಯುವಕ
ಕಾಮ್ರೇಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತದ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕಾರಿನಡಿ ಸಿಲುಕಿ ರಸ್ತೆಯಲ್ಲಿ ಎಳೆದೊಯ್ದು ಕೊಲೆ ಮಾಡಲಾಗಿದೆ. ನಾಗರಿಕರೊಬ್ಬರು ಈ ದೃಶ್ಯವನ್ನು ವೀಡಯೋ ಮಾಡಿ ಕ್ಲಿಪ್ ಅನ್ನು ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದು ಕಾರಿನ ವಿವರಗಳನ್ನು ಪಡೆಯಲು ಮತ್ತು ಅಪರಾಧವನ್ನು ಪತ್ತೆಹಚ್ಚಲು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.
20 ವರ್ಷದ ಯುವತಿ ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆದು ಇತ್ತೀಚೆಗೆ ಸಾವನ್ನಪ್ಪಿದ್ದಳು. ದೆಹಲಿಯ ಕಾಂಝಾವಾಲಾ ಪ್ರದೇಶದಲ್ಲಿ ಘಟನೆ ನಡೆದಿತ್ತು. ಆಕೆಯನ್ನು ಸಹ ಕಾರು 12 ಕಿಮೀ ಎಳೆದೊಯ್ದು ಮೃತಪಟ್ಟಿದ್ದಳು.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k