Viral Video: ನಾಗವಲ್ಲಿ ವೇಷ ತೊಟ್ಟು ಮೆಟ್ರೋ ಪ್ರಯಾಣಿಕರನ್ನು ಹೆದರಿಸಿದ ಮಹಿಳೆ – ಬೇಸತ್ತು ಸೀಟ್ ಬಿಟ್ಟ ಯುವಕ

ಲಕ್ನೋ: ಮಹಿಳೆಯೊಬ್ಬರು ನಾಗವಲ್ಲಿ ವೇಷ ತೊಟ್ಟು (ಹಿಂದಿ – ಮಂಜುಲಿಕಾ) ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಬೆದರಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2007ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾ ʼಭೂಲ್ ಭುಲಯ್ಯ’ದಲ್ಲಿ (Bhool Bhulaiya) ಮಂಜುಲಿಕಾ (Manjulika) ಪಾತ್ರ ಗಮನ ಸೆಳೆದಿತ್ತು. ಆ ಪಾತ್ರದ ಮಾದರಿಯ ವೇಷ ತೊಟ್ಟಿದ್ದ ಮಹಿಳೆ ನೋಯ್ಡಾ ಮೆಟ್ರೋ (Noida Metro) ಹತ್ತಿ, ಪ್ರಯಾಣಿಕರನ್ನು ಬೆದರಿಸುವಂತೆ ನಟಿಸಿದ್ದಾರೆ. ಇದನ್ನೂ ಓದಿ: ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ
चलती मेट्रो में #Reels बेचारा हेडफ़ोन वाला डर के भाग गया #noidametro pic.twitter.com/xYN0icDCIH
— Aviral singh (@aviralsingh7777) January 24, 2023
ಮೆಟ್ರೋದಲ್ಲಿ ನಿಂತಿದ್ದವರನ್ನಷ್ಟೇ ಅಲ್ಲ, ಸೀಟ್‌ನಲ್ಲಿ ಕುಳಿತಿದ್ದವರ ಬಳಿಗೂ ಹೋಗಿ ಮಹಿಳೆ ಹೆದರಿಸುವುದು, ಪಾತ್ರದ ಸನ್ನಿವೇಶಗಳನ್ನು ಮಹಿಳೆ ಅಭಿನಯ ಮಾಡಿದ್ದಾರೆ.
ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಿದ್ದ ಯುವಕನ ಬಳಿಗೆ ಮಹಿಳೆ ಹೋಗಿ ಬೆನ್ನು ತಟ್ಟಿದ್ದಾರೆ. ಆತನನ್ನೂ ಬೆದರಿಸುವಂತೆ ಅಭಿನಯಿಸಿದ್ದಾರೆ. ಇದನ್ನು ಗಮನಿಸಿದ ಯುವಕ ಸೀಟ್‌ನಿಂದ ಎದ್ದು ಹೋಗಿದ್ದಾನೆ. ನಂತರ ಆಕೆ ಆ ಸೀಟ್‌ನಲ್ಲಿ ಕುಳಿತುಕೊಂಡ ದೃಶ್ಯದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸರ್ಕಾರಿ ಹುದ್ದೆ ಉಳಿಸಿಕೊಳ್ಳಲು ಹೆಣ್ಣು ಮಗುವನ್ನು ಕಾಲುವೆಗೆ ಎಸೆದ ದಂಪತಿ!
ಆಕೆ ನಂತರ, ನೆಟ್‌ಫ್ಲಿಕ್ಸ್ ಶೋ ‘ಮನಿ ಹೀಸ್ಟ್’ನಿಂದ ಪ್ರೇರಿತ ಪಾತ್ರದಂತೆ ವೇಶ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ಮೆಟ್ರೋದಲ್ಲಿ ಕಾಣಿಸಿಕೊಳ್ಳುತ್ತಾನೆ. ವೀಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಮೆಟ್ರೋದಲ್ಲಿ ಮಕ್ಕಳು ಹೆದರಿಕೊಳ್ಳುತ್ತಾರೆ” ಎಂದು ಅನೇಕರು ಮಹಿಳೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಘಟನೆಯನ್ನು ಗಮನಿಸಿ ಅನೇಕರು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k