
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ (JNU) ವಿದ್ಯಾರ್ಥಿಗಳ (Student) ಒಕ್ಕೂಟದ ಕಚೇರಿಯಲ್ಲಿ ವಿದ್ಯುತ್ (Electricity) ಹಾಗೂ ಇಂಟರ್‌ನೆಟ್ (Internet) ಸ್ಥಗಿತಗೊಂಡಿದ್ದರಿಂದ ಇಂದು ರಾತ್ರಿ ಪ್ರದರ್ಶನಗೊಳ್ಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ (BBC Documentary) ಸ್ಥಗಿತಗೊಂಡಿದೆ.
ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನವು ಇಂದು (ಮಂಗಳವಾರ) ರಾತ್ರಿ 9 ಗಂಟೆಗೆ ಪ್ರಾರಂಭಿಸಲು ಯೋಜಿಸಿದ್ದರು. ಆದರೆ ಜೆಎನ್‍ಯು ಆಡಳಿತ ಮಂಡಳಿ ಸ್ಕ್ರೀನಿಂಗ್‍ಗೆ ಅನುಮತಿ ನೀಡಿರಲಿಲ್ಲ. ಅಷ್ಟೇ ಅಲ್ಲದೇ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿತ್ತು.
ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರೆ ಯಾವುದೇ ನಿಯಮ ಉಲ್ಲಂಘನೆಯಾಗುವುದಿಲ್ಲ. ಜೊತೆಗೆ ಕೋಮು ಸೌಹಾರ್ದವನ್ನು ಹಾಳಾಗುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು.
ಸಿಪಿಎಂನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಆಯೇಶಿ ಘೋಷ್, ಇಂದು ನಾವು ಖಂಡಿತವಾಗಿಯೂ ಸಾಕ್ಷ್ಯಚಿತ್ರವನ್ನು ನೋಡುತ್ತೇವೆ. ನಾವು ಅದನ್ನು ಕ್ಯೂಆರ್ ಕೋಡ್ ಮೂಲಕ ನೋಡುತ್ತೇವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಂತಿಮವಾಗಿ ಕ್ಯಾಂಪಸ್‍ನೊಳಗಿನ ಕೆಫೆಟೇರಿಯಾದಲ್ಲಿ ತಮ್ಮ ಮೊಬೈಲ್‍ಗಳಲ್ಲಿ ಡೌನ್‍ಲೋಡ್ ಮಾಡಿದ ನಂತರ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪತ್ರಕರ್ತರು ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು – ಆರ್. ಅಶೋಕ್
ಘಟನೆಯೇನು?: 2002ರ ಗುಜರಾತ್ ಧಂಗೆಗೆ ಸಂಬಂಧಿಸಿದಂತೆ ಬಿಬಿಸಿ ರೂಪಿಸಿರುವ ಡಾಕ್ಯುಮೆಂಟರಿ ಇಂಡಿಯಾ; ದಿ ಮೋದಿ ಕ್ವೆಶ್ಚನ್ ದೇಶ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ಮೋದಿಯನ್ನು ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿರುವ ಕೇಂದ್ರ ಸರ್ಕಾರ ಈಗಾಗಲೇ, ಯೂಟ್ಯೂಬ್, ಟ್ವಿಟ್ಟರ್‌ನಲ್ಲಿ ಈ ಡಾಕ್ಯುಮೆಂಟರಿ ಮೇಲೆ ನಿಷೇಧ ಹೇರಿದೆ.
ಮೋದಿ ವಿರೋಧಿಗಳು ಮಾತ್ರ ಸುಮ್ಮನಿಲ್ಲ. ಕಾಂಗ್ರೆಸ್‍ನ ಅಧೀರ್ ರಂಜನ್ ಚೌಧರಿ, ಟಿಎಂಸಿಯ ಮಹುವಾ ಮೋಯಿತ್ರಾ, ಡೆರಿಕ್ ಓಬ್ರಿಯಾನ್ ಸೇರಿದಂತೆ ಹಲವರು ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಡಾಕ್ಯುಮೆಂಟರಿ ಲಿಂಕ್ ಹಂಚಿಕೊಂಡು, ಇದನ್ನು ನೋಡಿ ನೋಡಿ ಎಂದು ಪ್ರಚೋದನೆ ನೀಡುತ್ತಿದ್ದಾರೆ. ಇದನ್ನೂ ಓದಿ: ಚಿರತೆ ದಾಳಿ – ಕುಟುಂಬಗಳನ್ನು ಭೇಟಿಯಾಗಿ ಗ್ರಾಮಸ್ಥರ ಅಹವಾಲು ಆಲಿಸಿದ ಎಸ್‌ಟಿಎಸ್
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k