ಮುಂಬೈ: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಶ್‍ಬ್ಯಾಕ್ ವಾಹನವೊಂದು(ವಿಮಾನವನ್ನು ಹಿಂದಕ್ಕೆ ತಳ್ಳುವ ವಾಹನ) ಹೊತ್ತಿ ಉರಿದ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ಇಂದು ನಡೆದಿದೆ.
ವಿಮಾನಕ್ಕೆ ಪುಶ್‍ಬ್ಯಾಕ್ ನೀಡುತ್ತಿದ್ದ ವಾಹನ ವಿಮಾನದ ಬಳಿಯೇ ಧಗ ಧಗ ಹೊತ್ತಿ ಉರಿಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು 10 ನಿಮಿಷದಲ್ಲಿ ಬೆಂಕಿ ನಂದಿಸಿ ಹತೋಟಿಗೆ ತಂದಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್
Advertisement
#WATCH A pushback tug caught fire at #Mumbai airport earlier today; fire under control now. Airport operations normal. pic.twitter.com/OEeOwAjjRG
— ANI (@ANI) January 10, 2022
Advertisement
ಇಂದು ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. Air India flight AI-647ಅನ್ನು ಹಿಂದಕ್ಕೆ ತಳ್ಳಲು ಹೊರಟಿದ್ದು, ವಿಮಾನದ ಬಳಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ
Advertisement
ಏರ್ ಇಂಡಿಯಾ ವಿಮಾನ ಮುಂಬೈನಿಂದ ಗುಜರಾತ್‍ನ ಜಾಮ್ ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.